110 ಪಾಸಿಟಿವ್, 1 ಸಾವು

ದಾವಣಗೆರೆ, ಜು. 27 – ಜಿಲ್ಲೆಯಲ್ಲಿ ಸೋಮವಾರ 110 ಕೊರೊನಾ ಸೋಂಕಿ ತರು ಕಂಡು ಬಂದಿದ್ದು, ಇದೇ ದಿನ 60 ಜನರು ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 

ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,533ಕ್ಕೆ ತಲುಪಿದೆ. ಇವರಲ್ಲಿ 927 ಜನರು ಗುಣವಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 569ಕ್ಕೆ ತಲುಪಿದೆ.

ಸೋಮವಾರ ಪತ್ತೆಯಾದ ಸೋಂಕಿತರಲ್ಲಿ ದಾವಣಗೆರೆ ತಾಲ್ಲೂಕಿನವರು ಅತಿ ಹೆಚ್ಚಿನ 73 ಜನರಾಗಿದ್ದಾರೆ. ಹರಿಹರದಲ್ಲಿ 7, ಜಗಳೂರಿನಲ್ಲಿ 16, ಚನ್ನಗಿರಿಯಲ್ಲಿ 7, ಹೊನ್ನಾಳಿ 3 ಹಾಗೂ ಹೊರ ಜಿಲ್ಲೆಯ ನಾಲ್ವರು ಸೇರಿದ್ದಾರೆ. 

ಇದೇ ದಿನ ದಾವಣಗೆರೆ ತಾಲ್ಲೂಕಿನ 41 ಜನರು ಗುಣವಾಗಿ ಬಿಡುಗಡೆ ಯಾಗಿದ್ದಾರೆ. ಹರಿಹರದ 11, ಜಗಳೂರಿನ 2, ಚನ್ನಗಿರಿಯ 2, ಹೊನ್ನಾಳಿಯ ನಾಲ್ವರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಹರಿಹರದ ಬೆಂಕಿ ನಗರದ 65 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ. ಇವರು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು.

ಸೋಂಕಿತರಲ್ಲಿ ದಾವಣಗೆರೆ ನಗರದ ಶಾಂತಿನಗರದ 30ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ. ಆಂಜನೇಯ ಬಡಾವಣೆಯ 32 ಹಾಗೂ 33ರ ಪುರುಷರು, ಕೆ.ಬಿ. ಬಡಾವಣೆ ಲಾಯರ್ ರಸ್ತೆಯ 28ರ ಪುರುಷ, ನಿಟುವಳ್ಳಿಯ 36, 56 ಹಾಗೂ 55ರ ಪುರುಷರು ಮತ್ತು 10ರ ಬಾಲಕಿ, ನಿಟುವಳ್ಳಿ ಹೊಸ ಬಡಾವಣೆಯ 49ರ ಮಹಿಳೆ,  ಆವರಗೆರೆಯ 78ರ ಮಹಿಳೆ ಸೇರಿದ್ದಾರೆ.

ವಿನೋಬನಗರದ 28,  65, 66 ಹಾಗೂ 67ರ ಪುರುಷರು, ಕೆ.ಟಿ.ಜೆ. ನಗರದ 48ರ ಪುರುಷ, 41 ಹಾಗೂ 52ರ ಮಹಿಳೆಯರು, ಬೇತೂರು ರಸ್ತೆಯ 46ರ ಮಹಿಳೆ, ಅಹಮದ್ ನಗರದ 59ರ ಮಹಿಳೆ, ನಿಜಲಿಂಗಪ್ಪ ಬಡಾವಣೆಯ 19, 47 ಹಾಗೂ 60ರ ಪುರುಷರು ಮತ್ತು 42ರ ಮಹಿಳೆ, ಜಾಲಿನಗರದ 56ರ ಪುರುಷ ಹಾಗೂ 75ರ ವೃದ್ಧ, ಎಂ.ಸಿ.ಸಿ. ಎ ಬ್ಲಾಕ್‌ನ 45, 52 ಹಾಗೂ 29ರ ಪುರುಷರು, 27ರ ಮಹಿಳೆ ಹಾಗೂ 76ರ ವೃದ್ಧೆಯಲ್ಲಿ ಸೋಂಕು ಕಂಡು ಬಂದಿದೆ.

ಮುದ್ದಾಭೋವಿ ಕಾಲೋನಿಯ 45ರ ಪುರುಷ, ಚಿಕ್ಕನಳ್ಳಿ ಹೊಸ ಬಡಾವಣೆಯ 60ರ ಮಹಿಳೆ, ಎಲ್ಲಮ್ಮನಗರದ 27ರ ಮಹಿಳೆ, ಕಾಯಿಪೇಟೆಯ 23ರ ಪುರುಷ, ಬಂಬೂ ಬಜಾರ್‌ನ 19, 21, 42, 46ರ ಪುರುಷರು, ಕುವೆಂಪು ನಗರದ 23ರ ಪುರುಷ ಹಾಗೂ 17ರ ಬಾಲಕ, ಹೊಂಡದ ಸರ್ಕಲ್‌ನ 26 ಹಾಗೂ 48ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ಎಸ್.ಎಸ್. ಬಡಾವಣೆಯ 55ರ ಪುರುಷ, ವಿಜಯನಗರದ 45ರ ಮಹಿಳೆ, ಎಸ್.ಎಸ್. ಲೇಔಟ್‌ನ 43ರ ಪುರುಷ, ಬನಶಂಕರಿ ಬಡಾವಣೆಯ 29ರ ಪುರುಷ, ವಿದ್ಯಾನಗರದ 67ರ ಮಹಿಳೆ, ಜಯನಗರದ 40ರ ಪುರುಷ, ಡಿಸಿಎಂ ಬಡಾವಣೆಯ 42ರ ಪುರುಷ, ಚಿಗಟೇರಿ ಲೇಔಟ್‌ನ 39ರ ಪುರುಷ, ಆಂಜನೇಯ ಬಡಾವಣೆಯ 30ರ ಪುರುಷ, ಪೊಲೀಸ್ ಕ್ವಾರ್ಟರ್ಸ್‌ನ 32 ಹಾಗೂ 48ರ ಪುರುಷರಲ್ಲಿ  ಸೋಂಕು ಕಂಡು ಬಂದಿದೆ.

ಸಿ.ಜಿ. ಆಸ್ಪತ್ರೆಯ ಸಿಬ್ಬಂದಿಯಾದ 50ರ ಮಹಿಳೆ ಹಾಗೂ 40ರ ಪುರುಷ, 28ರ ವೈದ್ಯಕೀಯ ವಿದ್ಯಾರ್ಥಿನಿ,  ಇದೇ ಆಸ್ಪತ್ರೆಯ 24 ವರ್ಷದ ಇಂಟರ್ನ್, 22ರ ಹೌಸ್ ಸರ್ಜನ್, ಭಾರತ್ ಕಾಲೋನಿಯ ಸ್ಟಾಫ್ ನರ್ಸ್ ಆಗಿರುವ 32 ಹಾಗೂ 45ರ ಮಹಿಳೆಯರು,ಖಾಸಗಿ ವೈದ್ಯಕೀಯ ಆಸ್ಪತ್ರೆಯ ಹಾಸ್ಟೆಲ್‌ನ 26ರ ಪುರುಷ, ಖಾಸಗಿ ಆಸ್ಪತ್ರೆಯ ಆಯಾ ಆಗಿರುವ 39ರ ಮಹಿಳೆ, ಖಾಸಗಿ ಆಸ್ಪತ್ರೆಯ 53ರ ಸ್ಟಾಫ್ ನರ್ಸ್, ಖಾಸಗಿ ಆಸ್ಪತ್ರೆಯ 41ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.

ದಾವಣಗೆರೆ ತಾಲ್ಲೂಕು ಮಹದೇವಪುರದ 20ರ ಪುರುಷ, ಮಾಯಕೊಂಡದ 70ರ ವೃದ್ಧ, ತೋಳಹುಣಸೆಯ 38ರ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

ಜಗಳೂರಿನ ಕೃಷ್ಣ ಬಡಾವಣೆಯ 80ರ ಪುರುಷ, ಹೌಸಿಂಗ್ ಕಾಲೋನಿಯ 45ರ ಪುರುಷ ಹಾಗೂ 40, 45ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.

ಜಗಳೂರು ತಾಲ್ಲೂಕಿನ ಸಿದ್ದಯ್ಯನ ಕೋಟೆಯ 22ರ ಪುರುಷ ಹಾಗೂ 40ರ ಮಹಿಳೆ, ದಿದ್ದಿಗೆಯ 71ರ ವೃದ್ಧೆ, 76ರ ವೃದ್ಧ,  40ರ ಮಹಿಳೆ, 30 ಹಾಗೂ 66ರ ಪುರುಷರು, 15ರ ಬಾಲಕ ಹಾಗೂ 11ರ ಬಾಲಕಿ, ದೊಣ್ಣೆಹಳ್ಳಿಯ 38ರ ಪುರುಷ, ಮುಷ್ಟೂರಿನ 74ರ ವೃದ್ಧ, ಚಿಕ್ಕಬನ್ನಿಹಟ್ಟಿಯ 58ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.

ನ್ಯಾಮತಿಯ 55ರ ಪುರುಷ ಹಾಗೂ ಹೊನ್ನಾಳಿ ತಾಲ್ಲೂಕಿನ ಅಗ್ನಿಶಾಮಕ ಠಾಣೆಯ 26ರ ಪುರುಷ, ತಾಲ್ಲೂಕಿನ ಗಂಟ್ಯಾಪುರದ 55ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.

ಚನ್ನಗಿರಿಯ ಪಿ.ಎಲ್.ಡಿ. ಬ್ಯಾಂಕ್ ಬಳಿಯ 21, 23 ಹಾಗೂ 42ರ ಮಹಿಳೆಯರು ಹಾಗೂ ತಾಲ್ಲೂಕಿನ ನುಗ್ಗಿಹಳ್ಳಿಯ 21ರ ಪುರುಷ, ನಲ್ಲೂರಿನ 32ರ ಪುರುಷ, ಕಂಚಿಗಾನಹಳ್ಳಿಯ 46ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ಹರಿಹರದ ಸರ್ಕಾರಿ ಆಸ್ಪತ್ರೆಯ 42ರ ಪುರುಷ, ಬಸವೇಶ್ವರ ಬಡಾವಣೆಯ 28ರ ಪುರುಷ, ಕೆ.ಆರ್. ನಗರದ 56ರ ಪುರುಷ ಹಾಗೂ ತಾಲ್ಲೂಕಿನ ಮಲೇಬೆನ್ನೂರಿನ 33ರ ಪುರುಷ, ಬನ್ನಿಕೋಡಿನ 28ರ ಪುರುಷ, ಹಳೆ ಭರಂಪುರದ 46ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ಚಿತ್ರದುರ್ಗದ ಬೆನಕನಹಳ್ಳಿಯ 28ರ ಪುರುಷ, ಬೆಳಗಾವಿ ಸವದತ್ತಿಯ 42ರ ಪುರುಷ ಹಾಗೂ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ 38ರ ಪುರುಷ, ಹಲಗೇರಿಯ 57ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ಬಿಡುಗಡೆಯಾದವರು: ದೇವರಾಜ ಬಡಾವಣೆಯ 61 ವರ್ಷದ ಪುರುಷ, ಆಲೂರಿನ 24 ವರ್ಷದ ಪುರುಷ, ಕೆ.ಆರ್. ರಸ್ತೆಯ 45 ವರ್ಷದ ಪುರುಷ, 48ರ ಪುರುಖ, ಪಿ.ಜೆ. ಬಡಾವಣೆಯ 35 ವರ್ಷದ ಮಹಿಳೆ, ದೇವರಾಜ ಅರಸು ಬಡಾವಣೆಯ 1ನೇ ಕ್ರಾಸ್, ಸಿ ಬ್ಲಾಕ್‌ನ 57ರ ಪುರುಷ, ನಿಟುವಳ್ಳಿ ಹೊಸ ಬಡಾವಣೆಯ 1ನೇ ಮುಖ್ಯರಸ್ತೆ, 4ನೇ ಕ್ರಾಸ್‌ನ 30ರ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 46ರ ಪುರುಷ, ವಿನೋಬನಗರದ 1ನೇ ಮೇನ್, 16ನೇ ಕ್ರಾಸ್‌ನ 53ರ ಮಹಿಳೆ, 

ಯರಗಂಟೆ ಗಣೇಶನ ದೇವಸ್ಥಾನದ ಹಿಂಭಾಗದ ವಾಸಿ 43ರ ಪುರುಷ, ನಿಜಲಿಂಗಪ್ಪ ಬಡಾವಣೆ 2ನೇ ಮೇನ್, 2ನೇ ಕ್ರಾಸ್‌ನ 34ರ ಪುರುಷ,  ರಜಾವುಲ್ಲಾ ಮುಸ್ತಾಫಾ ನಗರದ 85ರ ವೃದ್ಧೆ, ಡಿಸಿಎಂ ಟೌನ್‌ಶಿಪ್‌ನ 72 ಪುರುಷ,  ವಿಜಯನಗರ ಬಡಾವಣೆ ಎಸ್‌ಬಿಐ ಎಟಿಎಂ ಹಿಂಭಾಗದ 38ರ ಪುರುಷ, ಬಸವನಾಳ ಗೊಲ್ಲರಹಟ್ಟಿಯ 40ರ ಮಹಿಳೆ, 45ರ ಪುರುಷ,  61ರ ಪುರುಷ.

ದಾವಣಗೆರೆ ದೇವರಾಜ ಅರಸು ಬಡಾವಣೆಯ 49ರ ಪುರುಷ, ವಿನಾಯಕನಗರ ಎಸ್‌ಬಿಐ ಎಟಿಎಂ ಬಳಿಯ 50ರ  ಪುರುಷ, ನಿಜಲಿಂಗಪ್ಪ ಬಡಾವಣೆ 5ನೇ ಕ್ರಾಸ್‌ನ 26ರ ಪುರುಷ, ದುಗ್ಗಮ್ಮ ಪೇಟೆ 19ರ ಯುವಕ, ಸಿದ್ದೇಶ್ವರ ಬಡಾವಣೆ 11ನೇ ಕ್ರಾಸ್‌ನ 35ರ  ಪುರುಷ, 

ಆಂಜನೇಯಯ ಬಡಾವಣೆ 14ನೇ ಕ್ರಾಸ್‌ನ 35ರ ಮಹಿಳೆ, 30ರ ಪುರುಷ,  ಕೆಟಿಜೆ ನಗರ 2ನೇ ಮೇನ್, 7ನೇ ಕ್ರಾಸ್‌ನ 38ರ ಪುರುಷ, ಕೆಟಿಜೆ ನಗರ 8ನೇ ಕ್ರಾಸ್‌ನ 32ರ ಮಹಿಳೆ,  ದಾವಣಗೆರೆ ನಗರದ  6ರ  ಬಾಲಕಿ,  ಹುಬ್ಬಳ್ಳಿ ಚೌಡಪ್ಪನ ಗಲ್ಲಿಯ 43ರ ಪುರುಷ, ಕಾಡಜ್ಜಿಯ 60ರ ಪುರುಷ,  ಹೊಂಡದ ವೃತ್ತದ  ಬಳಿಯ 65ರ ಮಹಿಳೆ, 44ರ ಪುರುಷ, ಆಂಜನೇಯ ಬಡಾವಣೆಯ 70ರ ಮಹಿಳೆ, 36ರ ಪುರುಷ, ಪಿ.ಬಿ. ರಸ್ತೆ 1ನೇ ವಾರ್ಡ್‌ನ 31ರ ಪುರುಷ,  ಪಿ.ಜೆ. ಬಡಾವಣೆಯ 48ರ ಮಹಿಳೆ, ವಿನಾಯಕ ಬಡಾವಣೆಯ 61ರ ಪುರುಷ,  ಆಂಜನೇಯ ಬಡಾವಣೆಯ 29ರ ಮಹಿಳೆ, 

ಹರಿಹರ 27ರ ಪುರುಷ, ಹರಿಹರ ದುರ್ಗೋಜಿ ಬೀದಿ ಹವಳದ ಬೀದಿಯ 34ರ ಪುರುಷ, ಹರಿಹರ ಅಮರಾವತಿ ಬ್ರಿಡ್ಜ್ ಬಳಿಯ 26ರ ಪುರುಷ,  ಆನಕೊಂಡದ 8ರ ಬಾಲಕಿ, ಹರಿಹರ ಹವಳದ ಬೀದಿಯ 65ರ ಮಹಿಳೆ, ಮಲೇಬೆನ್ನೂರಿನ 45ರ ಪುರುಷ, ಹರಿಹರ ಹವಳದ ಬೀದಿಯ  39ರ ಮಹಿಳೆ, 51ರ ಮಹಿಳೆ, ಹರಿಹರ ನಗರದ 4ರ ಬಾಲಕ, ಹರಿಹರ ಜೆ.ಸಿ. ಬಡಾವಣೆಯ 48ರ ಮಹಿಳೆ,  ಮಲೇಬೆನ್ನೂರಿನ 25ರ ಯುವಕ, 

ಹೊನ್ನಾಳಿ ತಾಲ್ಲೂಕು ಎನ್.ಜಿ. ಹಳ್ಳಿಯ 33ರ ಮಹಿಳೆ, ಕೆಟಿಜೆ ನಗರ 8ನೇ ಕ್ರಾಸ್‌ನ 42ರ ಪುರುಷ,   ನ್ಯಾಮತಿ ಹೊಸಮಳಲಿಯ 30ರ ಪುರುಷ, ಹೊನ್ನಾಳಿ ಟಿ.ಎಂ. ರಸ್ತೆಯ 20, 22ರ ಯುವಕರು, ಹೊನ್ನಾಳಿಯ 40ರ ಮಹಿಳೆ, 

ಜಗಳೂರು ತಾಲ್ಲೂಕು ಸಿದ್ದಮ್ಮನಹಳ್ಳಿಯ 54ರ ಪುರುಷ, ಜಗಳೂರು ಗೊಲ್ಲರಹಟ್ಟಿ ವಾಟರ್ ಫಿಲ್ಟರ್ ಬಳಿಯ 30ರ ಪುರುಷ, ಚನ್ನಗಿರಿ ನಲ್ಲೂರು 19ರ ಯುವಕ, 21ರ ಪುರುಷ ಇವರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.

error: Content is protected !!