2ಎ ಪಟ್ಟಿಗೆ ಸೇರಿಸುವಂತೆ ಕೂಡ್ಲಿಗಿ ಪಂಚಮಸಾಲಿ ಸಮುದಾಯ ಮನವಿ

ಕೂಡ್ಲಿಗಿ, ಅ.29 – ವೀರ ಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸುವಂತೆ ಮತ್ತು ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರ್ಪಡಿಸಲು ಶಿಫಾರಸ್ಸು ಮಾಡಬೇಕೆಂದು ಕೂಡ್ಲಿಗಿ ಪಂಚಮಸಾಲಿ ಸಂಘದಿಂದ ತಹಶೀಲ್ದಾರ್ ಮುಖಾಂತರ ನಿನ್ನೆ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

ಈ ಕುರಿತು ಮಾತನಾಡಿದ ಕೂಡ್ಲಿಗಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು  ಅಧ್ಯಕ್ಷ ಟಿ. ಜಿ. ಮಲ್ಲಿಕಾರ್ಜುನಗೌಡ, ಈ ಕುರಿತು 2003ರಲ್ಲಿ   ಸಮುದಾಯದ ಅಂದಿನ ರಾಜ್ಯಾಧ್ಯಕ್ಷ ಬಾವಿ ಬೆಟ್ಟಪ್ಪ ನೇತೃತ್ವದಲ್ಲಿ ಸಮುದಾಯದ ಮುಖಂಡರ ನಿಯೋಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡುವಂತೆ ತಿಳಿಸಿದ್ದರು. ಅದರಂತೆ 2008, 2009ರಲ್ಲಿ ಹರಿಹರ ಪೀಠದ ಪಂಚಮಸಾಲಿ ಜಗದ್ಗುರುಗಳಿಗೆ ಮಾತು ಕೊಟ್ಟಂತೆ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಿ ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವಂತೆ   ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗುಂಡುಮುಣುಗು ತಿಪ್ಪೇಸ್ವಾಮಿ, ಹಾರಕಬಾವಿ ಆರ್.ಜಿ. ಲಿಂಗನಗೌಡ್ರು, ಜಿಲ್ಲಾ ಪಂಚಾಯತಿ ಸದಸ್ಯ ಹೆಚ್. ರೇವಣ್ಣ, ತಾಲ್ಲೂಕು ಪಂಚಾಯತಿ ಸದಸ್ಯ ಚಿನ್ನಪ್ಪ, ಮರುಳಸಿದ್ದಪ್ಪ, ಶಿವಣ್ಣ, ಕೊಡದೀರಪ್ಪ, ಬಸವರಾಜ್, ಮಂಜುನಾಥ, ಶರಣಪ್ಪ, ನಂದೀಶ, ಕೆ. ಜಿ. ಸಂದೀಪ್ ಕುಮಾರ್, ಕೊಟ್ರೇಶ ಮತ್ತಿತರರು ಉಪಸ್ಥಿತರಿದ್ದರು.

error: Content is protected !!