ಆಗಸ್ಟ್‌ನಿಂದ ‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆ

ಆಗಸ್ಟ್‌ನಿಂದ 'ಮತ್ತೆ ಕಲ್ಯಾಣ' ಅಂತರ್ಜಾಲ ಉಪನ್ಯಾಸ ಮಾಲಿಕೆ - Janathavaniಸಾಣೇಹಳ್ಳಿ, ಜು.25- ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಆಗಸ್ಟ್ 1 ರಿಂದ 30 ರವರೆಗೆ `ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿದೆ

ವಚನಗಳು ಇಂದಿನ ನಮ್ಮ ಬದುಕಿಗೂ ಹಿಡಿದ ಕನ್ನಡಿ. ಆ ಕನ್ನಡಿಯಲ್ಲಿ ಮುಖ ನೋಡಿಕೊಂಡು ಮುಖದ ತನ್ಮೂಲಕ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಪ್ರತಿದಿನ ಒಂದು ಜಿಲ್ಲೆಯಂತೆ 30 ಜಿಲ್ಲೆಗಳಲ್ಲಿ `ಮತ್ತೆ ಕಲ್ಯಾಣ’ ಎನ್ನುವ ವಿನೂತನ ಅಭಿಯಾನ ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು.

`ಮತ್ತೆ ಕಲ್ಯಾಣ’ ಅಭಿಯಾನ ಮತ್ತೆ ಯಾವಾಗ? ಇದು ಹಲವರ ಪ್ರಶ್ನೆ. ಇದು ಪ್ರತಿವರ್ಷ ನಡೆಯುವ ಜಾತ್ರೆ, ತೇರು ಅಲ್ಲ. ಆತ್ಮಾವಲೋಕನದ ಮೂಲಕ ಶರಣರ ವಿಚಾರಗಳನ್ನು ಅರಿಯುವ ಮತ್ತು ಆಚರಣೆ ಯಲ್ಲಿ ತರುವ ಅಭಿಯಾನ. ಅದನ್ನು ಯಾರು ಬೇಕಾದರೂ ಮಾಡಬಹುದು ಎಂದು ಪೂಜ್ಯರು ಕಳೆದ ವರ್ಷ 30 ಜಿಲ್ಲೆಗಳಲ್ಲೂ ಹೇಳುತ್ತ ಬಂದಿದ್ದರು. ಈ ವರ್ಷ `ಕೊರೊನಾ’ ವೈರಸ್ ಹಾವಳಿಯಿಂದ ಎಲ್ಲೂ ಬಹಿರಂಗ ವಾಗಿ ಸಭೆಗಳನ್ನು ಮಾಡುವಂತಿಲ್ಲ. ಆದರೂ ಶರಣರ ವಿಚಾರಗಳನ್ನು ಜನರ ಮನಕ್ಕೆ ಮುಟ್ಟಿಸುವ ಪುಣ್ಯದ ಕಾರ್ಯ ನಡೆಯಲೇ ಬೇಕು. ಈ ನೆಲೆಯಲ್ಲಿ ಅಂತರ್ಜಾಲವನ್ನು ಬಳಸಿಕೊಂಡು ಆಗಸ್ಟ್ 1 ರಿಂದ 30 ರವರೆಗೆ ಶರಣರ ವೈಚಾರಿಕ, ವೈಜ್ಞಾನಿಕ ಮತ್ತು ಅನುಭಾವಿಕ ವಿಚಾರಗಳನ್ನು ಜನರಿಗೆ ಮುಟ್ಟಿಸಲು ಪೂಜ್ಯರು ಸಂಕಲ್ಪಿಸಿದ್ದಾರೆ.

ಪ್ರತಿದಿನ ಸಂಜೆ 6 ಗಂಟೆಗೆ ಶಿವಸಂಚಾರದ ಕಲಾವಿದರಿಂದ ವಚನ ಗಾಯನ, 6.10 ಕ್ಕೆ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ, 6.15ಕ್ಕೆ ಉಪನ್ಯಾಸ 6.40ಕ್ಕೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಂದ ಆಶೀರ್ವಚನ 7.05ಕ್ಕೆ ಪ್ರಶ್ನೋತ್ತರ ಮತ್ತು ಕಲ್ಯಾಣ ಗೀತೆ ಇರುತ್ತದೆ.

ಅಗಸ್ಟ್ 1 ರಂದು ನವದೆಹಲಿಯ ನ್ಯಾ. ಮೋಹನ ಶಾಂತನಗೌಡರ್ ಕಾರ್ಯಕ್ರಮ ಉದ್ಘಾಟಿಸುವರು. `ಬಸವಪೂರ್ವ ಸಮಾಜ’ ಕುರಿತಂತೆ ಪ್ರೊ. ಟಿ ಆರ್ ಚಂದ್ರಶೇಖರ್ ಮಾತನಾಡಲಿದ್ದಾರೆ. ಆ. 2 ರಂದು `ವಚನ ಸಾಹಿತ್ಯ-ಸಾಮಾಜಿಕ ಜಾಲತಾಣಗಳು’ ವಿಷಯ ಕುರಿತು ಡಾ. ಹೆಚ್ ವಿ ವಾಸು, ಆ.3ಕ್ಕೆ `ಕಾಯಕ ಜೀವಿಗಳ ಚಳವಳಿ – ಡಾ. ಸಿ ವೀರಣ್ಣ, ಆ.4ಕ್ಕೆ  `ವಚನ ಚಳವಳಿಯ ಪ್ರಸ್ತುತತೆ ಮತ್ತು ವೈಶಿಷ್ಟ್ಯತೆ’ – ಡಾ. ಶೋಭಾ ಸಾಹುಕಾರ್, 5 ರಂದು `ವಚನಕಾರರ ಆಶಯ’ – ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, 6ರಂದು `ವಚನಕಾರರ ಜಾತ್ಯತೀತತೆ-ಲಿಂಗಸಮಾನತೆ’ – ಡಾ. ವಿನಯಾ ಒಕ್ಕುಂದ, 7 ರಂದು ವಚನ ಸಂವಿಧಾನ’ – ಸಿ ಎಸ್ ದ್ವಾರಕನಾಥ, 8 ರಂದು `ಅರಿತರೆ ಶರಣ-ಮರೆತರೆ ಮಾನವ’ – ಡಾ. ನರೇಂದ್ರ ರೈ ದೇರ್ಲಾ, 9 ರಂದು `ದೇವ-ದೇವಾಲಯ-ದೇವರು’ – ಶ್ರೀ ನಿಜಗುಣಾನಂದ ಸ್ವಾಮೀಜಿ, 10 ರಂದು ಡಾ. ಪುರುಷೋತ್ತಮ ಬಿಳಿಮಲೆ ಅವರಿಂದ `ಶರಣರ ಆಹಾರ ನೀತಿ’ ವಿಷಯ ಕುರಿತು ಉಪನ್ಯಾಸ ನಡೆಯಲಿದೆ.

ಆಗಸ್ಟ್ 11 ರಂದು `ವಚನಗಳಲ್ಲಿ ವೈಚಾರಿಕತೆ-ವೈಜ್ಞಾನಿಕತೆ’ – ಡಾ. ಧರಣಿದೇವಿ ಮಾಲಗತ್ತಿ, 12 ರಂದು `ಕೊರೊನಾ, ಮದ್ಯಪಾನ’ – ಡಾ. ಶ್ರೀನಿವಾಸ ಕಕ್ಕಿಲ್ಲಾಯ, 13 ರಂದು `ವಚನ ಚಳವಳಿಯ ಪರಿಣಾಮ’ – ಎಲ್ ಎನ್ ಮುಕುಂದರಾಜ,  14 ರಂದು `ಶರಣರ ಮೌಢ್ಯ ವಿರೋಧಿ ನಿಲವು’ – ಡಾ. ಸಬೀಹಾ ಭೂಮಿಗೌಡ, 15 ರಂದು `ಶರಣರ ನೈತಿಕ ಮೌಲ್ಯಗಳು’ – ಡಾ. ಹೆಚ್ ಎಸ್ ಶಿವಪ್ರಕಾಶ,16 ರಂದು `ಶರಣರ ದೃಷ್ಟಿಯಲ್ಲಿ ಕೃಷಿ’ – ಡಾ. ಎಂ ಜಿ ಈಶ್ವರಪ್ಪ, 17 ರಂದು `ಹರಿಹರನ ದಲಿತ ಪ್ರಜ್ಞೆ’ – ಡಾ. ಅರವಿಂದ ಮಾಲಗತ್ತಿ, 18 ರಂದು `ವಚನ ಸಾಹಿತ್ಯ ಮತ್ತು ನೂರೊಂದು ವಿರಕ್ತರು’ – ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮಿಗಳು,  19 ರಂದು `ವಚನಪಿತಾಮಹ ಫ ಗು ಹಳಕಟ್ಟಿ’ – ಡಾ. ಎಂ ಎಸ್ ಆಶಾದೇವಿ, 20 ರಂದು – ಡಾ. ಬಸವರಾಜ ಸಾದರ ಅವರಿಂದ `ಶರಣ ಸಂದೇಶ – ಮಠಗಳ ಪಾತ್ರ’ ಕುರಿತು ಉಪನ್ಯಾಸ ನೀಡಲಿದ್ದಾರೆ.

21 ರಂದು `ಶರಣರ ಹತ್ಯಾಕಾಂಡ’ – ಅಕ್ಕ ಅನ್ನಪೂರ್ಣತಾಯಿ 22 ರಂದು `ಶರಣರ ಕುರಿತ ನಾಟಕಗಳು’ – ಸಿ ಬಸವಲಿಂಗಯ್ಯ, 23 ರಂದು `ವಚನ ಸಾಹಿತ್ಯ ಕನ್ನಡದ ಉಸಿರು’ – ಮೇನಕಾ ನರೇಂದ್ರ ಪಾಟೀಲ, 24 ರಂದು `ಶರಣರ ಅಹಿಂಸಾವಾದ’ – ಡಾ. ದಾದಾಪೀರ್ ನವಿಲೆಹಾಳ್, 25 ರಂದು `ವಚನ ತತ್ವ ಪ್ರಚಾರದಲ್ಲಿ `ಶಿವಸಂಚಾರ’’ – ಶ್ರೀನಿವಾಸ ಜಿ ಕಪ್ಪಣ್ಣ, 26 ರಂದು `ಧರ್ಮ-ರಾಜಕೀಯ; ಅಂದು-ಇಂದು’ – ಮಹಾದೇವ ಪ್ರಕಾಶ, 27 ರಂದು `ಶಿವಯೋಗ’ – ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, 28 ರಂದು `ಲಿಂಗಾಯತ ಧರ್ಮ’ – ಎಸ್ ಎಂ ಜಾಮ ದಾರ, 29 ರಂದು `ಅಂತರಂಗ-ಬಹಿರಂಗ ಶುದ್ಧಿ’ – ಡಾ. ಶ್ರೀ ಬಸವಲಿಂಗ ಪಟ್ಟದದೇವರು 30 ರಂದು `ವಚನಗಳಲ್ಲಿ ಪರಿಸರ ಪ್ರೇಮ’ ಡಿ.ಪಿ.  ಪ್ರಕಾಶ್ ಉಪನ್ಯಾಸ ನೀಡುವರು.

ಡಾ. ಚಂದ್ರಶೇಖರ ಕಂಬಾರ ಸಮಾ ರೋಪ ನುಡಿಗಳನ್ನಾಡುವರು. ಈ ಕಾರ್ಯ ಕ್ರಮಗಳ ನೇರಪ್ರಸಾರವನ್ನು ವೆಬ್‌ಸೈಟ್: http://www.shivasanchara.org,  ಯೂಟ್ಯೂಬ್: shivasanchara ಫೇಸ್‌ಬುಕ್ ಶಿವ ಸಂಚಾರ-ಸಾಣೇಹಳ್ಳಿ ಮೂಲಕ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗೆ 9449649850/9663177254 ಸಂಪರ್ಕಿಸಲು ಶ್ರೀಮಠ ತಿಳಿಸಿದೆ. 

error: Content is protected !!