ಮಳೆ-ಬಿರುಗಾಳಿ : ಧರೆಗುರುಳಿದ ಮೆಕ್ಕೆಜೋಳ

ದಾವಣಗೆರೆ, ಜು. 25 – ತಾಲ್ಲೂಕಿನ ಬಾವಿಹಾಳ್ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಮೆಕ್ಕೆಜೋಳ ಧರೆಗುರುಳಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ.

ಗ್ರಾಮದ ಹನುಮಂತಪ್ಪ, ಚನ್ನಪ್ಪ, ಸರೋಜಮ್ಮ, ರುದ್ರಮ್ಮ, ಆನಂದಪ್ಪ ಸೇರಿದಂತೆ ಸುಮಾರು 20 ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಮೆಕ್ಕೆಜೋಳ ಭೂಮಿ ಪಾಲಾಗಿದೆ.  

ಮೇ ತಿಂಗಳಲ್ಲಿ ಸುರಿದಿದ್ದ ಮಳೆಗೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಕಾಳು ಕಟ್ಟಲು ಪ್ರಾರಂಭಿಸಿತ್ತು. ಅಲ್ಲದೆ ಇನ್ನೂ ಒಂದೂವರೆ ತಿಂಗಳು ಕಳೆದಿದ್ದರೆ ಮೆಕ್ಕೆಜೋಳ ಫಲಕ್ಕೆ ಬರುತ್ತಿತ್ತು. ಮೊದಲ ಮುಂಗಾರು ಆರಂಭದಲ್ಲಿ ಉತ್ತಮವಾಗಿ ಬಂದಿದ್ದ ಮಳೆಗೆ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಳಿಕ ಮಳೆರಾಯ ಬಿಡುವು ಕೊಟ್ಟಿದ್ದರಿಂದ ಚಿಗರೊಡೆಯುತ್ತಿದ್ದ ಮೆಕ್ಕೆಜೋಳ ಇತ್ತೀಚಿಗೆ ಬಂದಿದ್ದ ಮಳೆಗೆ ಉತ್ತಮ ಫಸಲು ಬಂದಿತ್ತು. ಆದರೆ, ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಮೆಕ್ಕೆಜೋಳ ಧರೆಗುರುಳಿದೆ.

ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ. ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಕೊಡಿ ಸಲು ಗಮನ ಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

error: Content is protected !!