ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಅವರಿಂದ ಪರಿಶೀಲನೆ
ದಾವಣಗೆರೆ, ಜು.24- ತಾಲ್ಲೂಕಿನ ನೇರಿಗೆ ಗ್ರಾಮದಲ್ಲಿ ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಯು ನೆಲ ಕಚ್ಚಿ, ಹಾನಿ ಸಂಭವಿಸಿದ ಸ್ಥಳಕ್ಕೆ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಕೋವಿಡ್-19ರ ಸಂದರ್ಭ ದಲ್ಲಿ ರೈತರು ಬೆಳೆದ ಬೆಳೆಗೆ ಮಾರು ಕಟ್ಟೆಯಲ್ಲಿ ಬೆಲೆ ಇಲ್ಲದೇ ಸಂಕಷ್ಟದಲ್ಲಿ ದ್ದಾರೆ. ಇಂತಹ ಸಂದರ್ಭದಲ್ಲಿ ಭಾರೀ ಮಳೆ ಗಾಳಿಯಿಂದ ಮೆಕ್ಕೆಜೋಳ ಬೆಳೆಯು ಹಾನಿಯಾಗಿದ್ದು, ಫಸಲು ಉತ್ತಮವಾಗಿ ಬೆಳೆಯುವ ಸಂದ ರ್ಭದಲ್ಲಿಯೇ ಹಾನಿಯಾಗಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ ಎಂದರು.
ಜಿಲ್ಲಾಡಳಿತ ಬೆಳೆ ಹಾನಿಗೊಳ ಗಾದ ರೈತರಿಗೆ ಸರ್ಕಾರದಿಂದ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಗ್ರಾಮದ ರೈತ ಮುಖಂಡರಾದ ಅಶೋಕ್, ನಾಗರಾಜ್, ರಾಜಪ್ಪ, ಜಯಪ್ಪ, ಪ್ರಭು ಮತ್ತಿತರರು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಜೊತೆಗಿದ್ದರು.