ದಾವಣಗೆರೆ, ಜು. 24 – ಜಿಲ್ಲೆಯಲ್ಲಿ ಶುಕ್ರವಾರ 77 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಇದೇ ದಿನ 84 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದೇ ದಿನ ಇಬ್ಬರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 1,255ಕ್ಕೆ ಏರಿಕೆಯಾಗಿದೆ. 751 ಜನರು ಇದುವರೆಗೆ ಬಿಡುಗಡೆಯಾಗಿದ್ದು, 34 ಜನರು ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 470 ಆಗಿದೆ.
ಶುಕ್ರವಾರ ಕಂಡು ಬಂದ ಸೋಂಕಿತರಲ್ಲಿ 47 ಜನರು ದಾವಣಗೆರೆ ತಾಲ್ಲೂಕಿನವರಾಗಿದ್ದಾರೆ. ಹರಿಹರ ತಾಲ್ಲೂಕಿನ 16, ಜಗಳೂರು ತಾಲ್ಲೂಕಿನ ಆರು, ಚನ್ನಗಿರಿ ತಾಲ್ಲೂಕಿನ ಐವರು ಹಾಗೂ ಹೊರ ಜಿಲ್ಲೆಯ ಮೂವರು ಸೇರಿದ್ದಾರೆ.
ಗುಣಮುಖರಾಗಿ ಬಿಡುಗಡೆಯಾದವರಲ್ಲಿ ದಾವಣಗೆರೆ ತಾಲ್ಲೂಕಿನ 48, ಹರಿಹರದ 17, ಜಗಳೂರಿನ ನಾಲ್ಕು, ಚನ್ನಗಿರಿಯ ಮೂರು, ಹೊನ್ನಾಳಿಯ ಒಂಭತ್ತು ಹಾಗೂ ಹೊರ ಜಿಲ್ಲೆಯ ಮೂವರು ಸೇರಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆ ನ್ನೂರಿನ 21 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇವರು ಸಕ್ಕರೆ ಕಾಯಿಲೆ ಸೇರಿದಂತೆ ಇತರೆ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇವರು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.
ದಾವಣಗೆರೆಯ ದೇವರಾಜ ಅರಸ್ ಬಡಾವಣೆಯ 23, 30, 34 ಹಾಗೂ 30 ವರ್ಷದ ಪುರುಷರು, ನಿಜಲಿಂಗಪ್ಪ ಬಡಾವಣೆಯ 38ರ ಪುರುಷ ಹಾಗೂ 37ರ ಮಹಿಳೆ, ಜಯನಗರದ 35ರ ಮಹಿಳೆ, ಎಂಸಿಸಿ ಎ ಬ್ಲಾಕ್ನ 37ರ ಮಹಿಳೆ, ಬಾಷಾನಗರದ 32ರ ಪುರುಷ ಸೋಂಕಿಗೆ ಸಿಲುಕಿದ್ದಾರೆ. ಕಾಯಿಪೇಟೆಯ 29 ವರ್ಷದ ಪುರುಷ, ವಿನೋಬನಗರದ 20 ಹಾಗೂ 37ರ ಪುರುಷರು, 30ರ ಮಹಿಳೆ, ಪಿ.ಬಿ. ರಸ್ತೆಯ ಲಕ್ಷ್ಮಿ ಮಹಲ್ ಹಿಂದಿನ 7 ವರ್ಷದ ಬಾಲಕ, ಕೆ.ಟಿ.ಜೆ. ನಗರದ 25ರ ಮಹಿಳೆ ಹಾಗೂ 87ರ ವೃದ್ಧರಲ್ಲಿ ಸೋಂಕು ಕಂಡು ಬಂದಿದೆ.
ದೇವರಾಜ ಅರಸ್ ಬಡಾವಣೆಯ 35ರ ಪುರುಷ ಹಾಗೂ 27ರ ಮಹಿಳೆ, ನಿಟ್ಟುವಳ್ಳಿಯ ಕೊಟ್ಟೂರೇಶ್ವರ ಬಡಾವಣೆಯ 48 ಹಾಗೂ 19ರ ಮಹಿಳೆ ಸೋಂಕಿಗೆ ಸಿಲುಕಿದ್ದಾರೆ.
ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 41, 52, 31 ಹಾಗೂ 37ರ ಪುರುಷರು ಹಾಗೂ 59ರ ಮಹಿಳೆ, ಸಿದ್ದಗಂಗಾ ಸ್ಕೂಲ್ ಬಳಿಯ 42ರ ಪುರುಷ, ಚಾಮರಾಜಪೇಟೆಯ 37ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.
ಅಹಮದ್ ನಗರದ 29 ಹಾಗೂ 68ರ ಮಹಿಳೆಯರು, ವಿನಾಯಕ ನಗರದ 42, 36 ವರ್ಷದ ಪುರುಷರು ಹಾಗೂ 12ರ ಬಾಲಕಿ, ಕುವೆಂಪು ನಗರದ 25ರ ಮಹಿಳೆ, ಆಜಾದ್ ನಗರದ 21ರ ಪುರುಷ, ಬೇತೂರು ರಸ್ತೆಯ 40ರ ಮಹಿಳೆ, ಗಾಂಧಿನಗರದ 48ರ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಖಾಸಗಿ ಆಸ್ಪತ್ರೆಯ 26ರ ಪುರುಷ, ಸಿ.ಜಿ. ಆಸ್ಪತ್ರೆಯ 34 ಹಾಗೂ 40 ವರ್ಷದ ಮಹಿಳೆಯರು, ನಿಟುವಳ್ಳಿಯ 27ರ ಪುರುಷ , ಎಸ್ಪಿಎಸ್ ನಗರದ 36ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.
ದಾವಣಗೆರೆ ತಾಲ್ಲೂಕು ಕಾಡಜ್ಜಿಯ 60ರ ಪುರುಷ, ಮಿಟ್ಲಕಟ್ಟೆಯ 56ರ ಪುರುಷ, ಆನೆಕೊಂಡದ 33ರ ಪುರುಷ ಸೋಂಕಿತರಾಗಿದ್ದಾರೆ.
ಜಗಳೂರಿನ ಶ್ರೀ ಕೃಷ್ಣ ಬಡಾವಣೆಯ 40ರ ಪುರುಷ, ಎನ್.ಜಿ.ಒ. ಕಾಲೋನಿಯ 72ರ ವೃದ್ಧ ಹಾಗೂ ಜಗಳೂರು ತಾಲ್ಲೂಕು ಚಿಕ್ಕರಕೆರೆಯ 21ರ ಮಹಿಳೆ, 65ರ ಪುರುಷ, ಚಿಕ್ಕಉಜ್ಜಿನಿಯ 28ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.
ಹರಿಹರದ ಸ್ಟಾಫ್ ನರ್ಸ್ ಆಗಿರುವ 33ರ ಮಹಿಳೆ, ಲದ್ವಾ ಬೀದಿಯ 36ರ ಪುರುಷ, ಜೆ.ಸಿ. ಬಡಾವಣೆಯ 55ರ ಮಹಿಳೆ, 21ರ ಮಹಿಳೆ, ಚಿನ್ನಪ್ಪ ಕಾಂಪೌಂಡ್ನ 20 ಹಾಗೂ 53ರ ಪುರುಷರು, ಕೇಶವನಗರದ 25ರ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಹರಿಹರ ತಾಲ್ಲೂಕು ಹನಗವಾಡಿಯ 13ರ ಬಾಲಕ, ನಾಗೇನಹಳ್ಳಿಯ 70ರ ಪುರುಷ, ಮಲೇಬೆನ್ನೂರಿನ 65ರ ಮಹಿಳೆ, ರಾಮತೀರ್ಥದ 50ರ ಮಹಿಳೆ ಸೋಂಕಿತರಾಗಿದ್ದಾರೆ
ಚನ್ನಗಿರಿಯ ರಂಗನಾಥ ಬಡಾವಣೆಯ 29ರ ಪುರುಷ ಹಾಗೂ ಚನ್ನಗಿರಿ ತಾಲ್ಲೂಕು ನಲ್ಲೂರಿನ 45ರ ಮಹಿಳೆ, ಸಂತೇಬೆನ್ನೂರಿನ 43ರ ಪುರುಷ, ತಣಿಗೆರೆಯ 35ರ ಪುರುಷ, ಚನ್ನಾಪುರದ 23ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.
ರಾಣೇಬೆನ್ನೂರಿನ ಕನಕದಾಸ ನಗರದ 21ರ ಮಹಿಳೆ, ಕಾರವಾರದ 37ರ ಪುರುಷ ಹಾಗೂ ರಾಣೇಬೆನ್ನೂರಿನ ಬೇವಿನಹಳ್ಳಿಯ 21ರ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಬಿಡುಗಡೆ ಹೊಂದಿದವರು: ದಾವಣಗೆರೆ ಮೆಹಬೂಬ್ ನಗರದ 50 ವರ್ಷದ ಪುರುಷ, 19ರ ಯುವಕ, 30ರ ಪುರುಷ, ದೇವರಾಜ ಅರಸು ಬಡಾವಣೆಯ 57 ವರ್ಷದ ಮಹಿಳೆ, ಭಗತ್ ಸಿಂಗ್ ನಗರದ 27ರ ಪುರುಷ, ಕಾಯಿ ಪೇಟೆಯ 19ರ ಯುವತಿ, ಶೇಖರಪ್ಪ ನಗರದ 1ನೇ ಕ್ರಾಸ್ನ 24ರ ಯುವತಿ, ಆಂಜನೇಯ ಬಡಾವಣೆಯ 63ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್ ವಾಟರ್ ಟ್ಯಾಂಕ್ ಬಳಿಯ 28ರ ಯುವತಿ, ಡಿಸಿಎಂ ಬಡಾವಣೆಯ 56ರ ಮಹಿಳೆ, ತುರ್ಚಘಟ್ಟದ 26ರ ಮಹಿಳೆ, ದೊಡ್ಡಬಾತಿಯ 64ರ ಪುರುಷ, ಆನೆಕೊಂಡದ 60ರ ಪುರುಷ.
ನಿಜಲಿಂಗಪ್ಪ ಬಡಾವಣೆಯ 65ರ ಪುರುಷ, ದೊಡ್ಡಬಾತಿಯ 40ರ ಪುರುಷ, ಸಿದ್ಧವೀರಪ್ಪ ಬಡಾವಣೆಯ 30ರ ಪುರುಷ, ಪೊಲೀಸ್ ಕ್ವಾರ್ಟ್ರಸ್ನ 49ರ ಪುರುಷ, ತುರ್ಚಘಟ್ಟದ 26ರ ಯುವಕ, ದೊಡ್ಡಬಾತಿ ಮೈತ್ರಿ ಹಾಸ್ಟೆಲ್ ಸಮೀಪದ 20ರ ಯುವಕ, ನ್ಯೂ ಬಂಬೂ ಬಜಾರ್ ನ 23ರ ಯುವಕ, ಆನೆಕೊಂಡದ 65ರ ಪುರುಷ, ನಿಜಲಿಂಗಪ್ಪ ಬಡಾವಣೆಯ 3ನೇ ಕ್ರಾಸ್ನ 23ರ ಯುವಕ, ಕಾಯಿಪೇಟೆ ಬಸವೇಶ್ವರ ದೇವಸ್ಥಾನದ ಹಿಂಭಾಗದ ವಾಸಿ 22ರ ಯುವತಿ, ದೇವರಾಜ ಅರಸು ಬಡಾವಣೆ 9ನೇ ಕ್ರಾಸ್ನ 24ರ ಯುವತಿ, ಕೊಳೇನಹಳ್ಳಿಯ 52ರ ಪುರುಷ, ಅಹ್ಮದ್ ನಗರ 5ನೇ ಕ್ರಾಸ್ನ 42ರ ಪುರುಷ, ಬಿ.ಎನ್. ಲೇ ಔಟ್ನ 21ರ ಯುವತಿ ಎಸ್.ಪಿ.ಎಸ್. ನಗರದ 2ನೇ ಸ್ಟೇಜ್ನ 32ರ ಪುರುಷ, ಎ.ವಿ. ನಗರ ಬೇತೂರು ರಸ್ತೆಯ 35ರ ಮಹಿಳೆ, 16ರ ಯುವತಿ. ಬಸವರಾಜ ಪೇಟೆಯ 30ರ ಮಹಿಳೆ, ಎಸ್.ಪಿ.ಎಸ್ ನಗರ, ಬೂದಾಳ್ ರಸ್ತೆಯ 29ರ ಯುವತಿ, ಬಸವರಾಜ ಪೇಟೆಯ 28ರ ಯುವತಿ, 29ರ ಯುವಕ, 5 ವರ್ಷದ ಬಾಲಕಿ, 28ರ ಪುರುಷ, 27ರ ಯುವತಿ, 31ರ ಯುವತಿ, ರಜಾವುಲ್ಲಾ ಮುಸ್ತಾಫಾ ನಗರದ 1ನೇ ಮೇನ್, 1ನೇ ಕ್ರಾಸ್ನ 72ರ ವೃದ್ಧ, ಬಸವರಾಜ ಪೇಟೆಯ 35ರ ಯುವಕ, ಎಂ.ಸಿ.ಸಿ. ಬಿ ಬ್ಲಾಕ್ನ 8ನೇ ಮೇನ್, 4ನೇ ಕ್ರಾಸ್ನ 23ರ ಯುವಕ, ಮಿಲ್ಲತ್ ಕಾಲೋನಿ 4ನೇ ಕ್ರಾಸ್ನ 55ರ ಮಹಿಳೆ, ಹಳ್ದಿಕೇರಿ ಸುಣಗಾರ ಬೀದಿ ಹರಿಹರದ 22ರ ಯುವಕ, ಕಲಪನಹಳ್ಳಿಯ 66ರ ಪುರುಷ, ಕೆ.ಟಿ.ಜೆ. ನಗರದ 42ರ ಪುರುಷ, ಹೊಂಡದ ವೃತ್ತದ ಬಳಿಯ 65 ವರ್ಷದ ಪುರುಷ.
ಹೊನ್ನಾಳಿ ತಾಲ್ಲೂಕು ದೊಡ್ಡಕೇರಿಯ 32ರ ಪುರುಷ, ಪೊಲೀಸ್ ಠಾಣೆಯ 45ರ ಪುರುಷ, ಕುಂದೂರು ಗ್ರಾಮದ 39ರ ಪುರುಷ, ಘಂಟ್ಯಾಪುರದ 22 ಹಾಗೂ 52 ವರ್ಷದ ಪುರುಷರು, ಪಾಲವನಹಳ್ಳಿ ಸೇವಾಲಾಲ್ ದೇವಸ್ಥಾನದ ಬಳಿಯ 21ರ ಯುವತಿ, ಜಿ.ಮಾಧಪುರದ 24ರ ಯುವತಿ, ಗೋಂದಿ ಚಟ್ನಿಹಳ್ಳಿ 22ರ ಯುವತಿ. ಚನ್ನಗಿರಿ ತಾಲ್ಲೂಕಿನ ಕಂಚಿಗನಹಳ್ಳಿಯ 48ರ ಮಹಿಳೆ, ಹಿರೇ ಗಂಗೂರಿನ 54ರ ಮಹಿಳೆ.
ಹರಿಹರ ನಗರದ 20ರ ಯುವಕ, 60ರ ಪುರುಷ, 29ರ ಯುವಕ, 32ರ ಮಹಿಳೆ, 6 ವರ್ಷದ ಬಾಲಕ, ಬೂದಿಹಾಳ್ನ 28ರ ಯುವಕ, ಬೆಂಕಿನಗರದ 40ರ ಪುರುಷ, ನೀಲಕಂಠ ನಗರದ 42ರ ಪುರುಷ, ಹನಗವಾಡಿಯ 65ರ ಪುರುಷ, ಹರ್ಲಾಪುರದ 48ರ ಮಹಿಳೆ, ಜೆ.ಸಿ. ಬಡಾವಣೆಯ 43ರ ಯುವತಿ, ಯಲವಟ್ಟಿಯ 28ರ ಯುವತಿ, 59ರ ಮಹಿಳೆ, 23ರ ಯುವಕ, 36ರ ಮಹಿಳೆ, ದೀಟೂರಿನ 27ರ ಪುರುಷ, ಬಾಂಗ್ಲಾ ಬಡಾವಣೆಯ 32ರ ಪುರುಷ.
ಹರಪನಹಳ್ಳಿ ತಾಲ್ಲೂಕಿನ ತೌಡೂರು ಗ್ರಾಮದ 24ರ ಮಹಿಳೆ, ಬೇವಿನಹಳ್ಳಿ ದೊಡ್ಡ ತಾಂಡಾದ 65ರ ಪುರುಷ, ಕಂಚಿಕೆರೆಯ 60ರ ಪುರುಷ ಕೋವಿಡ್ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.