ಮಲೇಬೆನ್ನೂರಿನಲ್ಲಿ ಮತ್ತೆ ನಾಲ್ವರಿಗೆ ಸೋಂಕು : ಪಟ್ಟಣಕ್ಕೆ ಎಡಿಸಿ ದಿಢೀರ್ ಭೇಟಿ

ಮಲೇಬೆನ್ನೂರು, ಜು.24- ಪಟ್ಟಣದಲ್ಲಿ ಶುಕ್ರವಾರ ಮತ್ತೆ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಇಲ್ಲಿನ 22 ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ನಿಟ್ಟೂರು ರಸ್ತೆಯ ನಿವಾಸಿ 62 ವರ್ಷದ ಹಿರಿಯ ಮುಖಂಡರೊಬ್ಬರಿಗೆ ಸೋಂಕು ತಗುಲಿದೆ. ಇವರು ಅನಾರೋಗ್ಯದ ಕಾರಣ ಗುರುವಾರ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ  ಎಂದು ತಿಳಿದು ಬಂದಿದೆ.

ತಂದೆ-ಮಗಳಿಗೆ ಸೋಂಕು : ಇಲ್ಲಿನ ಬಸವೇಶ್ವರ ಬಡಾವಣೆಯ 18ನೇ ವಾರ್ಡಿನಲ್ಲಿ ರುವ ಚಂದ್ರಗುತ್ತ್ಯೆಮ್ಮ ದೇವಸ್ಥಾನ ಸಮೀಪದ ನಿವಾಸಿ 46 ವರ್ಷದ ವ್ಯಕ್ತಿ ಮತ್ತು ಈತನ 20 ವರ್ಷದ ಮಗಳಿಗೆ ಸೋಂಕು ಕಾಣಿಸಿಕೊಂಡಿದೆ.

8ನೇ ಪ್ರಕರಣ : ಇಲ್ಲಿನ ಇಂದಿರಾನಗರದ 10ನೇ ವಾರ್ಡಿನ ಮೇದೂರು ಗಲ್ಲಿಯಲ್ಲಿ ಈಗಾಗಲೇ ಸೀಲ್‌ಡೌನ್ ಆಗಿರುವ ಪ್ರದೇಶದಲ್ಲಿರುವ ಮೃತ ಸೋಂಕಿತ ಮಹಿಳೆಯ ಕುಟುಂಬಕ್ಕೆ ಸೇರಿದ 46 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದೇ ಮನೆಯಲ್ಲಿ ಈಗಾಗಲೇ 7 ಜನರಿಗೆ ಸೋಂಕು ತಗುಲಿದೆ.

ಎಡಿಸಿ ಸಭೆ : ಪಟ್ಟಣಕ್ಕೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರು ಪುರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ, ಕೊರೊನಾ ಸೋಂಕಿತರ ಜೊತೆ ಪ್ರಾಥ ಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರು ವವರ ಮಾಹಿತಿ ನೀಡುವಂತೆ ಸೂಚಿಸಿದರು.

ಪುರಸಭೆ ಸಿಓ ಧರಣೇಂದ್ರಕುಮಾರ್, ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪುರಸಭೆ ಅಧಿಕಾರಿಗಳಾದ ಉಮೇಶ್, ನವೀನ್ ಸಭೆಯಲ್ಲಿ ಹಾಜರಿದ್ದರು.

error: Content is protected !!