ರಾಣೇಬೆನ್ನೂರಿನ 13 ಕೊಳಚೆ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ

ರಾಣೇಬೆನ್ನೂರಿನ 13 ಕೊಳಚೆ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ - Janathavaniರಾಣೇಬೆನ್ನೂರು, ಅ.27- ನಗರದ ವಿವಿಧೆಡೆ 13 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದ್ದು, ಪ್ರತಿಯೊಬ್ಬರಿಗೆ 9 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಶಾಸಕ ಅರುಣಕುಮಾರ ಪೂಜಾರ ತಿಳಿಸಿದರು.

ಅವರಿಂದು ತಮ್ಮ ನಿವಾಸದಲ್ಲಿ ಪತ್ರಿಕೆಯವರ ಜೊತೆ ಮಾತನಾಡುತ್ತಿದ್ದರು.

2 ಲಕ್ಷ ಕಾರ್ಮಿಕ ಇಲಾಖೆ, 7 ಲಕ್ಷ ಕೊಳಚೆ ನಿರ್ಮೂಲನಾ ಮಂಡಳಿ ಭರಿಸಲಿದ್ದು, ಹರಿಜನ ಗಿರಿಜನ ಫಲಾನುಭವಿಗಳು 50 ಸಾವಿರ  ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳು 70  ಸಾವಿರ ಹಣ ಭರಿಸಬೇಕಿದೆ ಎಂದು ಶಾಸಕ ಪೂಜಾರ ವಿವರಿಸಿದರು.

ನಗರದ ಮದ್ಯವರ್ತಿ ಸ್ಥಳ ಅಶೋಕ ಸರ್ಕಲ್ ಬಳಿಯ ಪೂರ್ವ ಬಡಾವಣೆ ಹಾಗೂ ಸಿದ್ದೇಶ್ವರ ದೇವಸ್ಥಾನದ ಬಳಿಯ ಪಶ್ಚಿಮ ಬಡಾವಣೆಯ ನಿವಾಸಿಗಳಿಗೆ ಅವರ ಮನೆಗಳ ಮಾಲ್ಕಿ ಹಕ್ಕುಪತ್ರ ಶೀಘ್ರದಲ್ಲೇ ದೊರೆಯಲಿದೆ ಎಂದು ಶಾಸಕರು ಹೇಳಿದರು.

ಸ್ವಾತಂತ್ರ್ಯ ಪೂರ್ವದ ಅಲ್ಲಿನ ನಿವಾಸಿಗಳಿಗೆ ಮಾಲ್ಕಿ ಹಕ್ಕು ಕೊಡಲು 2018 ರಲ್ಲಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿತ್ತು. ಆ ತೀರ್ಮಾನದನ್ವಯ ಅಲ್ಲಿನ ನಾಲ್ಕಾರು ನಿವಾಸಿಗಳಿಗೆ ಹಕ್ಕು ದೊರಕುತ್ತಿತ್ತು. ಇದನ್ನು ಮನಗಂಡಿರುವ ಮುಖ್ಯಮಂತ್ರಿಗಳು ಮತ್ತೆ ಸಚಿವ ಸಂಪುಟದಲ್ಲಿ ನಿರ್ಣಯಿಸಿ ಇಲ್ಲಿನ ಎಲ್ಲ ನಿವಾಸಿಗಳಿಗೂ ಹಕ್ಕು ದೊರಕಿಸಿಕೊಡಲಿದ್ದಾರೆ ಎಂದು ಶಾಸಕ ಅರುಣಕುಮಾರ ಹೇಳಿದರು.

ಬೇಲೂರ ಸ್ಮಶಾನ ರಸ್ತೆ : ತಾಲ್ಲೂಕಿನ ಬೇಲೂರು ಗ್ರಾಮದ ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ್ದನ್ನು ಗ್ರಾಮಸ್ತರು ನನ್ನ ಗಮನಕ್ಕೆ ತಂದಿದ್ದು, ರಸ್ತೆ ನಿರ್ಮಿಸಲು ಶಾಸಕರು ಸ್ವಂತಕ್ಕೆ ಅವಶ್ಯವಿದ್ದ ಜಾಗಯನ್ನು ಖರೀದಿಸಿ ಅಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದು, ಗ್ರಾಮಸ್ತರು ಶಾಸಕರ  ಕಾರ್ಯವನ್ನು  ಶ್ಲಾಘಿಸಿದರು.

error: Content is protected !!