ಹರಪನಹಳ್ಳಿ, ಅ.27- ದೇಶ ಮತ್ತು ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಸಹಕಾರಿ ಕ್ಷೇತ್ರಗಳ ಸೇವೆ ಪ್ರಮುಖವಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು.
ತಾಲ್ಲೂಕಿನ ತೆಲಗಿ ಗ್ರಾಮದಲ್ಲಿ ತೆಲಗಿ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕಿನ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾ ಡಿದ ಅವರು, ಎಲ್ಲಾ ರಂಗಗಳಲ್ಲೂ ಸಹಕಾರಿ ಕ್ಷೇತ್ರ ಛಾಪು ಮೂಡಿಸಿದೆ. ಹಳ್ಳಿಗಳ ಅಭಿವೃದ್ಧಿ, ಗುಡಿ ಕೈಗಾರಿಕೆಗೆ ಮಾರುಕಟ್ಟೆಯ ಮುಖ್ಯ ಧೇಯವಾ ಗಿಟ್ಟುಕೊಂಡು ಸಹಕಾರಿ ಸಂಘ ಪ್ರೇರಣೆ ನೀಡುತ್ತಿದೆ. ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ರಂಗದಲ್ಲಿ ಪ್ರಗತಿ ಸಾಧಿಸಲು ಉತ್ತೇಜನ ಕೊಡುವ ನಿಟ್ಟಿನಲ್ಲಿ ಸಹಕಾರ ರಂಗ ಯಶಸ್ವಿಯಾಗುತ್ತಿದೆ. ಗ್ರಾಮಗಳಲ್ಲಿ ಸಣ್ಣ ವ್ಯಾಪಾರಸ್ಥರಿಗೆ, ಅಂಗಡಿ ವ್ಯಾಪಾರಿಗಳಿಗೆ, ತರಕಾರಿ ವ್ಯಾಪಾರಿಗಳಿಗೆ, ಸಹಕಾರಿ ಬ್ಯಾಂಕ್‍ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ, ಅವರ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಲು ಸಹಕಾರಿಯಾ ಗಿದ್ದು, ಸಕಾಲಕ್ಕೆ ಸಾಲವನ್ನು ಮರು ಪಾವತಿ ಮಾಡುವ ಮೂಲಕ ಹೊಸ ಸಾಲವನ್ನು ತೆಗೆದು ಕೊಳ್ಳುವ ಮೂಲಕ ವ್ಯಾಪಾರಸ್ಥರು ಆರ್ಥಿಕ ಸ್ವಾವ ಲಂಬನೆಯ ಜೀವನ ನಡೆಸಬಹುದು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ವೈ.ಬಸಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯ ರನ್ನು ಸಹಕಾರ ಸಂಸ್ಥೆಗಳಲ್ಲಿ ತೊಡಗಿಸಿಕೊಂಡರೆ ದೇಶದ ಬಡಜನತೆಗೆ ಬೆಳಕನ್ನು ಚೆಲ್ಲಿದಂತಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ರೈತನಿಗೆ ಏನು ಸೌಲಭ್ಯ ಕೊಡಬೇಕಿತ್ತೋ ಅದನ್ನು ಸರ್ಕಾರಗಳು ಮಾಡು ತ್ತಿಲ್ಲ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಿದರೆ ಸಾಲ ಮನ್ನಾ ಮಾಡುವ ಅವಶ್ಯಕತೆ ಸರ್ಕಾರಕ್ಕೆ ಬರಲ್ಲ ಎಂದ ಅವರು, ಸಹಕಾರಿ ಕ್ಷೇತ್ರ ಮುಂದೆ ಬರಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಮುಕ್ತಗೊಳಿಸ ಬೇಕು. ರೈತರಿಗೆ 1 ಲಕ್ಷದವರೆಗೆ ಸಾಲ ಸಹಕಾರಿ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಿಗುವಂತಾಗಬೇಕು ಎಂದರು.
ಗುತ್ತಿಗೆದಾರರಾದ ಬಾಣದ ಅಂಜಿನಪ್ಪ, ಟಿ.ಉಮಾಕಾಂತ್, ಇಟ್ಟಿಗುಡಿ ಅಂಜಿನಪ್ಪ, ರವಿ ನಾಯ್ಕ, ಪಿ.ಪರಶುರಾಮ್, ವಕೀಲರುಗಳಾದ ನೀಲಗುಂದ ಬಿ.ವಾಗೀಶ್, ಟಿ.ಬಸವರಾಜ್, ಮುಖಂಡರುಗಳಾದ ಕುಂಚೂರು ಲಕ್ಷ್ಮಣ, ವೈ, ರಾಜಪ್ಪ, ಸೆಳ್ಳಮ್ಮಿ ದುರುಗಪ್ಪ, ಹಲವಾಗಲು ಕರಿಯಪ್ಪ, ಟಿ.ಲಕ್ಕಪ್ಪ, ಎಂ.ಧರ್ಮಣ್ಣ, ಸಂಗಪ್ಪ, ಯೋಗೇಶ್, ಬಿ.ಹನುಮಂತಪ್ಪ, ಎಸ್. ಗಜೇಂದ್ರ, ಬಸವರಾಜ್, ಆರ್.ಟಿ.ಐ. ಕಾರ್ಯಕರ್ತ ಟಿ.ಶ್ರೀಧರ್, ವಿ. ಅಂಜಿನಪ್ಪ ಸೇರಿದಂತೆ, ಇತರರಿದ್ದರು.