ದಾವಣಗೆರೆ, ಜು.22- ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘದ ಜಿಲ್ಲಾ ಮತ್ತು ನಗರ ಘಟಕದ ವತಿಯಿಂದ ನಗರದ ಪಿ.ಬಿ.ರಸ್ತೆಯ ರಶ್ಮಿ ಹಾಸ್ಟೆಲ್ ಸಮೀಪದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘದ ಅಧ್ಯಕ್ಷ ಹೆಚ್. ಜಲೀಲ್‌ಸಾಬ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರದಿಂದ 70 ಲಕ್ಷ ರೂ. ಅನುದಾನ ಬಂದಿದೆ. ಈ ನಿಟ್ಟಿನಲ್ಲಿ ಒಂದು ಉತ್ತಮ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಯಿತು ಎಂದು ಹೇಳಿದರು.
ಈ ಸಮುದಾಯ ಭವನದಲ್ಲಿ ಐಎಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ತೆರೆಯಬೇಕೆಂಬ ಉದ್ದೇಶ ಹೊಂದಲಾಗಿದ್ದು, ಇದು ಸಮಾಜದ ಮತ್ತು ಎಲ್ಲಾ
ಜಾತಿಯ ಜನರಿಗೆ ಉಪಯೋಗ
ವಾಗಬೇಕಿದೆ. ಇದೊಂದು ಸಮಾಜದ ಉತ್ತಮ ಕಾರ್ಯ. ಅದಕ್ಕೆ ಇಂದು ನಾಂದಿ ಹಾಡಲಿದ್ದೇವೆ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡರಾದ ಇಮಾಂ ಸಾಬ್ ಮಾತನಾಡಿ, ಈ ನಿವೇಶನವನ್ನು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಮುತುವರ್ಜಿಯಿಂದ ಪಡೆದುಕೊಳ್ಳಲಾಗಿದೆ. ಇದಕ್ಕೆ ಅವರು ಸಮಾಜದ ಮೇಲೆ ಹೊಂದಿದ್ದ ಕಾಳಜಿಯೂ ಕಾರಣವಾಗಿದೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಅಧ್ಯಕ್ಷ ಶಿರಾಜ್ ಅಹಮದ್, ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಸಮಾಜದ ನಗರಾಧ್ಯಕ್ಷ ಅನ್ವರ್ ಹುಸೇನ್, ನಗರ ಕಾರ್ಯದರ್ಶಿ ಶೌಕತ್ ಅಲಿ, ವಿಭಾಗೀಯ ಉಪಾಧ್ಯಕ್ಷ ಡಿ.ಬಿ. ಹಸನ್‌ಪೀರ್, ಚಿತ್ರದುರ್ಗದ ವಕ್ಫ್ ಬೋರ್ಡ್‌ನ ಅಧಿಕಾರಿ ಅನ್ವರ್‌ಸಾಬ್, ಸಮಾಜದ ಮುಖಂಡರಾದ ಬಿ.ದಾದಾ ಖಲಂದರ್ ಬಳ್ಳಾರಿ, ಅಯಾಜ್ ಹುಸೇನ್, ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಎ.ಫಕೃದ್ಧೀನ್, ದಿಬ್ದಳ್ಳಿ ಖಾಸಿಂಸಾಬ್, ಡಿ.ಖಾದರ್ ಬಾಷಾ, ರಿತ್ತಿ ಮಹಬೂಬ್ ಸಾಬ್, ಡಾ. ದಾದಾಪೀರ್ ನವಿಲೇಹಾಳ್, ರೈಲ್ವೆ ಬಾಷಾ ಸಾಬ್, ಶೌಕತ್ ಮತ್ತಿತರರಿದ್ದರು.