ಮಲೇಬೆನ್ನೂರಿನಲ್ಲಿ 2 ಪಾಸಿಟಿವ್

ರೋಗ ಲಕ್ಷಣಗಳಿಲ್ಲದ ಸೋಂಕಿತರು ವಾಪಸ್ ಮನೆಗೆ

ಮಲೇಬೆನ್ನೂರು, ಜು.22- ಪಟ್ಟಣದಲ್ಲಿ ಬುಧವಾರ ಮತ್ತೆ 2 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಪಟ್ಟಣದಲ್ಲಿ 15 ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆ ಎರಡಾಗಿದೆ.

ನೌಕರನಿಗೆ ಸೋಂಕು : ಇಲ್ಲಿನ ಪುರಸಭೆಯಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ 26 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಈತ ವಾಸವಾಗಿದ್ದ 14ನೇ ವಾರ್ಡಿನ ಗೌಸ್ ನಗರದಲ್ಲಿ ರುವ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಕಳೆದ 17 ರಂದು ಕೊರೊನಾ ಟೆಸ್ಟ್ ಮಾಡಿಸಿ ಕೊಂಡಿದ್ದ ಯುವಕನ ಪರೀಕ್ಷಾ ವರದಿ ಬುಧವಾರ ಮಧ್ಯಾಹ್ನ ಪಾಸಿಟಿವ್ ಬಂದಿತು. 4-5 ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ ಈತ ಬುಧವಾರ ಬೆಳಿಗ್ಗೆ ಪುರಸಭೆ ಕಚೇರಿಗೆ ಬಂದು ಹೋಗಿದ್ದ ಎನ್ನಲಾಗಿದ್ದು, ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ನಂತರ ಈತನ ಜೊತೆಗೆ ಸಂಪರ್ಕ ಹೊಂದಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಯಿತು. ಸೋಂಕಿತ ಯುವಕನನ್ನು ಕ್ವಾರಂಟೈನ್ ಮಾಡಲಾಯಿತು. ಸೋಂ ಕಿತ ಯುವಕನನ್ನು ಗುತ್ತೂರಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಿದ್ದು, ಅವರ ತಂದೆ-ತಾಯಿ, ಸಹೋದರನನ್ನು ಕ್ವಾರಂಟೈನ್ ಮಾಡಲಾಯಿತು.

ಮೃತ ವೃದ್ಧನಿಗೆ ಸೋಂಕು : ಇಲ್ಲಿನ 15 ನೇ ವಾರ್ಡಿನ ಟಿಪ್ಪು ನಗರದ ನಿವಾಸಿ 60 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆ ಯನ್ನು ಕೋವಿಡ್ ನಿಯಮದ ಪ್ರಕಾರ ದಾವಣಗೆರೆಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಸೋಂಕಿತರು ವಾಪಸ್ ಮನೆಗೆ : ಕೊರೊನಾ ಪಾಸಿಟಿವ್ ಬಂದಿದ್ದ ಪಟ್ಟಣದ 8 ಜನರನ್ನು ಮತ್ತು ಹರಳಹಳ್ಳಿ ಗ್ರಾಮದ ವೃದ್ದರೊಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ಆರೋಗ್ಯ, ರಕ್ತ ಹಾಗೂ ಉಸಿರಾಟದ ಬಗ್ಗೆ ಎಕ್ಸರೇ ಮಾಡಿದಾಗ ಯಾವುದೇ ತರಹದ ರೋಗ ಲಕ್ಷಣಗಳು ಇಲ್ಲದ ಕಾರಣ ಅವರೆಲ್ಲರನ್ನೂ ಸೋಮವಾರ ರಾತ್ರಿ ಆಸ್ಪತ್ರೆ ಯಿಂದ ವಾಪಸ್ ಮನೆಗೆ ಕಳುಹಿಸಿದ್ದು, ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ ಎಂದು   ವೈದ್ಯಾಧಿ ಕಾರಿ ಡಾ. ಲಕ್ಷ್ಮಿದೇವಿ ಮಾಹಿತಿ ನೀಡಿದರು.

ಯಲವಟ್ಟಿ ಗ್ರಾಮದಿಂದಲೂ ಸಿ.ಜಿ ಆಸ್ಪತ್ರೆಗೆ ಕರೆದೊಯ್ದಿದಿದ್ದ ಇಬ್ಬರು ಮಹಿಳಾ ಸೋಂಕಿತರನ್ನು ಯಾವುದೇ ರೋಗ ಲಕ್ಷಣ ಇರದ ಕಾರಣ,  ಇಂದು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ್ದಾರೆ.

error: Content is protected !!