ಹರಿಹರ : ಸರಳವಾಗಿ ವಿಜಯ ದಶಮಿ ಆಚರಣೆ

ಹರಿಹರ, ಅ.26- ನಗರದಲ್ಲಿ ವಿಜಯ ದಶಮಿ ದಸರಾ ಹಬ್ಬದ ಆಚರಣೆಯನ್ನು ಸರಳವಾಗಿ ಮಾಡಲಾಯಿತು.

ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಸ್ಥಾನದ ಮುಂಭಾಗ ದಿಂದ ಶ್ರೀ ಹರಿಹರೇಶ್ವರ ಸ್ವಾಮಿಯ ಉತ್ಸವ ಮೂರ್ತಿ, ಲಕ್ಷ್ಮಿದೇವಿ, ದಸರಾ ಉತ್ಸವ ಸಮಿತಿಯ ದುರ್ಗಾದೇವಿ ಮೂರ್ತಿಯನ್ನು ಮೆರವಣಿಗೆಯ ಮೂಲಕ ಹಳೆ ತುಂಗಭದ್ರಾ ನದಿಯ ಪಕ್ಕದಲ್ಲಿರುವ ಜೋಡು ಬಸವೇಶ್ವರ ದೇವಸ್ಥಾನದ ಆವರಣದ ಬನ್ನಿ ಮಂಟಪಕ್ಕೆ ತರಲಾಯಿತು. ನಾರಾಯಣ್ ಜೋಯಿಸ್,  ಚಿದಂಬರ ಜೋಯಿಸ್‌ ಅವರುಗಳ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳನ್ನು ಸಲ್ಲಿಸಿದ ನಂತರ ಮಹಾಮಂಗಳಾರತಿಯೊಂದಿಗೆ ಬನ್ನಿ ಮುಡಿಯಲಾಯಿತು.

ಮೆರವಣಿಗೆಯು ವಿವಿಧ ಕಲಾ, ಬಾಜಾ ಭಜಂತ್ರಿಗಳೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಪ್ರಾರಂಭಗೊಂಡು, ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ, ಹಳೆ ಪಿ.ಬಿ. ರಸ್ತೆಯ ಮುಖಾಂತರ ಸಂಚಾರಿ ಬನ್ನಿ ಮುಡಿ ಕಟ್ಟೆಯನ್ನು ತಲುಪಿತು.

ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ನಗರಸಭಾ ಸದಸ್ಯ ಶಂಕರ್ ಖಟಾವ್ಕರ್, ಮುಖಂಡರಾದ ಅಮರಾವತಿ ಮಹಾದೇವಪ್ಪ, ಕಸಬ ಗೌಡ್ರು ಲಿಂಗರಾಜ್ ಪಾಟೀಲ್, ಪಿಎಸ್ಐ ಎಸ್.ಶೈಲಾಶ್ರೀ, ಕೆ‌. ಜಡಿಯಪ್ಪ. ಬಸವರಾಜ್ ಪಾಟೀಲ್, ಹನುಮಂತಪ್ಪ ರಡ್ಡಿ, ರೇವಣಸಿದ್ದಪ್ಪ ಅಮರಾವತಿ, ಕರಿಬಸಪ್ಪ ಕಂಚಿಕೇರಿ, ಪ್ರಕಾಶ್ ಶೆಟ್ಟಿ, ಶಿವಪ್ರಕಾಶ್ ಶಾಸ್ತ್ರಿ, ನಾಗೇಂದ್ರಪ್ಪ, ಅಂಬಾಸ್ ಹಂಸಾಗರ್, ರುದ್ರಪ್ಪ, ತಿಪ್ಪೇಶ್, ವಿಜಯ್ ಮಾಲತೇಶ್, ಅರ್ಚಕ ಗುರುಪ್ರಸಾದ್, ಹರಿಶಂಕರ್ ಜೋಯಿಸ್, ನಾಗರಾಜ್, ಕಾಳಿಂಗ, ಕೃಷ್ಣ, ನೇತ್ರಾವತಿ ಪ್ಯಾಟಿ, ಭಾಗ್ಯಮ್ಮ, ಹರಿಹರೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ವೆಂಕಟೇಶ್, ಪ್ರಶಾಂತ್, ತುಳಜಪ್ಪ ಭೂತೆ, ಚಂದನ್ ಮೂರ್ಕಲ್, ಅರುಣ್ ಕುಮಾರ್ ಕಂಚಿಕೇರಿ, ಜಗದೀಶ್ ನಿಲಗುಂದ, ಆರ್, ಐ ಆನಂದ್, ಹೇಮಂತ್ ಇತರರು ಹಾಜರಿದ್ದರು.

error: Content is protected !!