ದಾವಣಗೆರೆ, ಜು.20- ಹರಿಹರದ ತುಂಗಭದ್ರಾ ಜಾಕ್ವೆಲ್-1 ರಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಗಳು ಭರದಿಂದ ನಡೆಯುತ್ತಿವೆ ಎಂದು 22 ಕೆರೆಗಳ ಹೋರಾಟ ಸಮಿತಿ ಉಪಾಧ್ಯಕ್ಷ ಜಿ.ಎಸ್. ರೇವಣಸಿದ್ದಪ್ಪ ತಿಳಿಸಿದ್ದಾರೆ.
ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಳಿ 22 ಕೆರೆಗಳ ಪೈಪ್ಲೈನ್ 5.6 ಅಡಿ ಆಳದ ಮೂಲಕ ಭರಮಸಾಗರದ ಕೆರೆಗೆ ನೀರನ್ನು ತುಂಬಿಸುವ ಕಾಮಗಾರಿ ಉತ್ತಮವಾಗಿ ನಡೆಯುತ್ತಿದೆ. ಭರಮಸಾಗರದಿಂದ ಮುಂದೆ ಸಾಗಿ 43 ಕೆರೆಗೆ ನೀರು ತುಂಬಲಿದೆ. ಗುತ್ತಿಗೆದಾರರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಜಮೀನುಗಳ ಮುಖಾಂತರ ಹಾದೂ ಹಾದು ಹೋಗುವ ಪೈಪ್ಲೈನ್ಗಳ ರೈತರಿಗೆ ಪರಿಹಾರದ ಬೆಳೆ ನಷ್ಟವನ್ನು ಸಹ ನೀಡಲಾಗುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಮಲ್ಲಶೆಟ್ಟಿಹಳ್ಳಿ ಬಳಿ ಭರಮಸಾಗರಕ್ಕೆ ಹೋ ಗುವ ಪೈಪ್ಲೈನ್ಗಳಿಗೆ ರೇವಣಸಿದ್ದಪ್ಪ ಪೂಜೆ ನೆರವೇರಿಸಿದರು.