ನಿಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಲು ಮಾಸ್ಕ್ ಧರಿಸಿ

ಹರಪನಹಳ್ಳಿ, ಅ.20 – 2020 ಬರೀ ಆಪತ್ತು  ಈ ಪ್ರಸ್ತುತ ವರ್ಷ ಸಾಧನೆ ಮಾಡಿದವರಿಗಿಂತ ಜೀವ ಉಳಿಸಿಕೊಂಡವರೇ ನಿಜವಾದ ಸಾಧಕರು ಎಂದು ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಜನಾಂದೋಲನ ಕೋವಿಡ್ 19 ವಿಷಯವಾಗಿ ಹರಪನಹಳ್ಳಿ ತಾಲ್ಲೂಕು ವಕೀಲರ ಸಂಘ, ಆರೋಗ್ಯ ಇಲಾಖೆ ಹಾಗೂ ಪುರಸಭೆ  ಸಂಯುಕ್ತ ಆಶ್ರಯದಲ್ಲಿ ಮಾನವ
ಸರಪಳಿ ನಿರ್ಮಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿ ಅವರು ಮಾತನಾಡಿದರು.

 ಪೊಲೀಸ್ ಇಲಾಖೆ ಭಯಕ್ಕೆ ನೀವು ಮಾಸ್ಕ್ ಹಾಕಿಕೊಳ್ಳುವುದಕ್ಕಿಂತ ನಿಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಲು ಮಾಸ್ಕ್ ಧರಿಸಿ, ಆಗಾಗ ಕೈತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಈ ವರ್ಷದ ಮಹತ್ತರ ಸಾಧನೆಯೇ ಆಗಲಿದೆ. 

ಪ್ರತಿಜ್ಞಾ ವಿಧಿ ಸಮಯದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶ್, ಡಾ. ವಿಜಯಕುಮಾರ್, ವಕೀಲರುಗಳಾದ  ಕೆ.ನಾಗರಾಜ್, ಎಂ.ಮೃತ್ಯುಂಜಯ್ಯ, ಬಂಡ್ರಿ ಆನಂದ, ಕೋಡಿಹಳ್ಳಿ  ಪ್ರಕಾಶ್, ಎ.ಮಲ್ಲಪ್ಪ, ಡಿ. ಹನುಮಂತಪ್ಪ, ವೈ.ಟಿ. ಕೊಟ್ರೇಶ್, ವಾಮದೇವ, ಶ್ರೀನಿವಾಸ್, ಕೆ. ಪ್ರಕಾಶ್, ಓ ತಿರುಪತಿ, ನ್ಯಾಯಾಲಯದ ಸಿಬ್ಬಂದಿಗಳಾದ  ಯ ಶೋಧ, ನಾಗರಾಜ್, ಮಂಜುನಾಥ್, ಬಸವ ರಾಜ್, ಕೊಟ್ರೇಶ್ ಮತ್ತಿತರರು ಹಾಜರಿದ್ದರು.

error: Content is protected !!