ಅನಧಿಕೃತ ಪ್ಲೆಕ್ಸ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮನವಿ

ದಾವಣಗೆರೆ, ಜು.11- ನಗರದಲ್ಲಿ ಅನಧಿಕೃತವಾಗಿ ನೂರಕ್ಕೂ ಹೆಚ್ಚು ಜನ್ಮ ದಿನದ ಶುಭಾಶಯಗಳನ್ನು ಸಾರುವ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ಇದರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಪಿ.ಜೆ. ಬಡಾವಣೆ ನಾಗರೀಕ ಹಿತರಕ್ಷಣಾ ಸಮಿತಿ ಮನವಿ ಮಾಡಿದ್ದಾರೆ.

ಮೇಲ್ಕಂಡ ಪ್ಲೆಕ್ಸ್‌ಗಳಿಗೆ ಪಾಲಿಕೆಯಿಂದಾಗಲೀ ಅಥವಾ ಇತರೆ ಯಾವುದೇ ಸರ್ಕಾರಿ ಕಚೇರಿಗಳಿಂದ ಪರವಾನಿಗೆಯನ್ನೂ ಸಹ ಪಡೆದಿರುವುದಿಲ್ಲ. ಜೊತೆಗೆ ಪ್ಲಾಸ್ಟಿಕ್ ಮೇಲೆ ಮುದ್ರಿಸಿರುವ ಪ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಟಿ. ಯುವರಾಜ್ ಆಪಾದಿಸಿದ್ದಾರೆ.

ಪಾಲಿಕೆ ಬೊಕ್ಕಸಕ್ಕೆ ಬರಬೇಕಾದ ತೆರಿಗೆಯೂ ಸಹ ವಂಚಿತವಾಗಿದೆ. ಸುಂದರವಾಗಿರುವ ನಗರದ ವೃತ್ತಗಳ ಅಂದವನ್ನು ಸಹ ಹಾಳುಗೆಡವುತ್ತಿದೆ. ಪ್ಲಾಸ್ಟಿಕ್ ಮೇಲೆ ಮುದ್ರಿಸಿರುವುದರಿಂದ ಪರಿಸರಕ್ಕೂ ಸಹ ಹಾನಿಯಾಗಿದೆ.  ಈ ಕುರಿತು ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಮಹಾನಗರ  ಪಾಲಿಕೆಯ ಆಯುಕ್ತರ ವಿರುದ್ಧ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ಲೆಕ್ಸ್ ಅಳವಡಿಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಹಿತರಕ್ಷಣಾ ವೇದಿಕೆ ಪರವಾಗಿ ಮೇಘರಾಜ್, ಗಂಗಾಧರ್, ಶಿವಕುಮಾರ್, ಧನುಷ್ ಇನ್ನಿತರರು ಮನವಿ ಮಾಡಿದ್ದಾರೆ.

error: Content is protected !!