ದಾವಣಗೆರೆ,ಜು.13- ನಗರದ ಬಾಪೂಜಿ ವಿದ್ಯಾಸಂಸ್ಥೆಯ ಜಜಮು ವೈದ್ಯಕೀಯ ಮಹಾವಿದ್ಯಾಲಯ, ಬಾಪೂಜಿ ಆಸ್ಪತ್ರೆಯ ಬಾಪೂಜಿ ರಕ್ತ ನಿಧಿ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಬಾಪೂಜಿ ರಕ್ತನಿಧಿ ಕೇಂದ್ರದಲ್ಲಿ ಪ್ಲೇಟ್ ಲೆಟ್ ಸ್ಫಿಯರ್ಸಿಯೋ ಘಟಕದ ಉದ್ಘಾಟನೆಯನ್ನು ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಬಿ.ಮರುಗೇಶ್ ಇಂದು ಉದ್ಘಾಟಿಸಿದರು.
ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಡಿ.ಎಸ್. ಕುಮಾರ್, ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ವರದೇಂದ್ರ ಕುಲಕರ್ಣಿ, ರಕ್ತ ನಿಧಿ ಅಧಿಕಾರಿಗಳಾದ ಡಾ. ಕೆ. ಜಗದೀಶ್ವರಿ, ಡಾ. ಬಿ. ನಿಕೇತನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ಲೇಟ್ ಲೆಟ್ ಪಿಯರ್ ಸಿಸ್ ನಿಂದ ತೆಗೆದ ಪ್ಲೇಟ್ ಲೆಟ್ ಅನ್ನು ಸಿಂಗಲ್ ಡೋನರ್ ಪ್ಲೇಟ್ಲೆಟ್ (ಎಸ್ಡಿಪಿ) ಎಂದು, ರಕ್ತ ವಿಭಜನೆಯಿಂದ ಬಂದ ಪ್ಲೇಟ್ಲೆಟ್
ರಾಂಡಮ್ ಡೋನರ್ ಪ್ಲೇಟ್ಲೆಟ್ ಎಂದು ಹೇಳಲಾಗುವುದು. ಎಸ್ ಡಿಪಿ ರಕ್ತದ ಬ್ಯಾಗುಗಳಲ್ಲಿ ಪ್ಲೇಟ್ ಲೆಟ್ ಸಂಖ್ಯೆ ಆರ್ ಡಿಪಿಗಿಂತ 5 ರಿಂದ 10 ಪಟ್ಟು ಹೆಚ್ಚಿರುತ್ತದೆ. ಇದರಿಂದ ರೋಗಿಯ ಪ್ಲೇಟ್ ಲೆಟ್ ಕೌಂಟ್ ಹೆಚ್ಚಾಗುವ ಸಾಧ್ಯತೆ ಗರಿಷ್ಠವಾಗಿರುತ್ತದೆ. ಎಸ್ ಡಿಪಿಯನ್ನು ಒಬ್ಬ ರಕ್ತದಾನಿಯಿಂದ ಪಡೆಯುವುದರಿಂದ ಪ್ರತಿಕ್ರಿಯೆ ಸಾಧ್ಯತೆ ಕಡಿಮೆ ಇರುತ್ತದೆ.
ಈ ಎಲ್ಲಾ ಪ್ರಯೋಜನಗಳಿರುವ ಎಸ್ಡಿಪಿ ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನದ ಘಟಕವನ್ನು ಬಾಪೂಜಿ ರಕ್ತ ನಿಧಿಯಲ್ಲಿ ಅಳವಡಿಸಿರುವುದು ಹೆಮ್ಮೆಯ ವಿಷಯ ಎಂದು ಡಾ. ಎಸ್.ಬಿ.ಮುರುಗೇಶ್ ತಿಳಿಸಿದರು.