ಶಿಷ್ಯವೇತನಕ್ಕಾಗಿ ಮಾತುಕತೆಗೆ ಸೂಚನೆ

ಶಿಷ್ಯವೇತನಕ್ಕಾಗಿ ಮಾತುಕತೆಗೆ ಸೂಚನೆ - Janathavaniಆಡಳಿತ ಮಂಡಳಿಯೊಂದಿಗೆ ಇಂದು ಸಭೆ: ಜಿಲ್ಲಾಧಿಕಾರಿ

ದಾವಣಗೆರೆ, ಜು. 13 – ಇಲ್ಲಿನ ಜೆ.ಜೆ.ಎಂ.ಸಿ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನ ಭರಿಸಲು ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ವಿಡಿಯೋ ಸಂವಾದದ ಸಂದರ್ಭದಲ್ಲಿ ಈ ಸೂಚನೆ ನೀಡಲಾಗಿದೆ.

ಶಿಷ್ಯವೇತನವನ್ನು ಆಡಳಿತ ಮಂಡಳಿಯೇ ಭರಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಅದರಂತೆ ಆಡಳಿತ ಮಂಡಳಿ ಸಂಪರ್ಕಿಸಿ ಚರ್ಚಿಸುವಂತೆ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬೀಳಗಿ, ವೈದ್ಯಕೀಯ ವಿದ್ಯಾರ್ಥಿಗಳ ಜೊತೆ ಈಗಾಗಲೇ ಸಭೆ ನಡೆಸಿದ್ದು ಅವರು ತಮಗೆ ಶಿಷ್ಯವೇತನ ಸಂಬಂಧ ಆಡಳಿತ ಮಂಡಳಿಯಿಂದ ಲಿಖಿತ ಆದೇಶ ಬರುವವರೆಗೆ ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವು ದಿಲ್ಲವೆಂದು ಹೇಳಿದ್ದಾರೆ. ನಾಳೆಯೇ ಆಡಳಿತ ಮಂಡಳಿ ಯೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

error: Content is protected !!