ಮಲೇಬೆನ್ನೂರು, ಜು.13- ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಕೆರೆ ಅಂಗಳದಲ್ಲಿ ನಾಗರಪಂಚಮಿ ಅಂಗವಾಗಿ ಜರುಗುತ್ತಿದ್ದ ಕಾರಣಿಕ ಜಾತ್ರೆಯನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ ಎಂದು ಉಪ ತಹಶೀಲ್ದಾರ್ ರವಿ ತಿಳಿಸಿದ್ದಾರೆ.
ಕಾರಣಿಕ ರದ್ದು ಪಡಿಸುವ ಕುರಿತು ಮೊನ್ನೆ ಕೊಮಾರನಹಳ್ಳಿಯಲ್ಲಿ ಗ್ರಾಮಸ್ಥರು ಸಭೆ ಸೇರಿ ತೀರ್ಮಾನಿಸಿದ್ದರು.
ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಕಾರ್ಯದರ್ಶಿ ಹಾಗೂ ಆರ್ಚಕರೊಂದಿಗೆ ಇಂದು ಸಭೆ ನಡೆಸಿ, ಇದೇ ದಿನಾಂಕ 25 ರಂದು ನಡೆಯಬೇಕಾಗಿದ್ದ ಕಾರಣಿಕೋತ್ಸವವನ್ನು ರದ್ದು ಪಡಿಸಿರುವ ಬಗ್ಗೆ ಜಾತ್ರೆಗೆ ಆಗಮಿಸುತ್ತಿದ್ದ ಎಲ್ಲಾ ಗ್ರಾಮಗಳಿಗೆ ತಿಳಿಸುವಂತೆ ರವಿ ಅವರು ಸೂಚಿಸಿದರು.
ಕೊಮಾರನಹಳ್ಳಿ, ಮಲೇಬೆನ್ನೂರು, ದಿಬ್ದಹಳ್ಳಿ, ಹಾಲಿವಾಣ, ಹರಳಹಳ್ಳಿ, ಯಕ್ಕನಹಳ್ಳಿ, ತಿಮ್ಲಾಪುರ, ಯರೇಹಳ್ಳಿ ಗ್ರಾಮಗಳ 12 ದೇವರುಗಳು ಈ ಕಾರಣಿಕೋತ್ಸವದ ಜಾತ್ರೆಯಲ್ಲಿ ಭಾಗವಹಿಸುತ್ತಿದ್ದವು. ಹರಳಹಳ್ಳಿಯ ಆಂಜನೇಯ ಹೇಳುತ್ತಿದ್ದರು.
ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ದೇವಸ್ಥಾನದ ಶ್ರೀಪಾದ ರಾವ್, ಮಧುಕರ್ ಪ್ರಭುಗಳು, ಅರ್ಚಕರಾದ ಮಂಜುನಾಥಾಚಾರ್, ಗುರುರಾಜ ಚಾರ್, ಕಾರ್ಯದರ್ಶಿ ಧರ್ಮರಾವ್, ಕೆ.ಬಿ.ವಾದಿರಾಜ್, ಅಚ್ಯುತಾಚಾರ್, ಎನ್.ಗುರುದತ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.