ದಾವಣಗೆರೆ, ಜು.12- ಸ್ಥಳೀಯ ವೈದ್ಯಕೀಯ ಕಾಲೇಜು ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಶಿಷ್ಯ ವೇತನಕ್ಕಾಗಿ ಹೋರಾಟ ನಡೆಸುತ್ತಿದ್ದು, ಈ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲ ನೀಡಿದೆ ಎಂದು ವೇದಿಕೆ ತಿಳಿಸಿದೆ.
ವೈದ್ಯರು ಕೊರೊನಾ ವಿರುದ್ಧ ಸೈನಿಕರಂತೆ ಸೆಣಸಾಡುತ್ತಿದ್ದಾರೆ. ಹಗಲು, ರಾತ್ರಿಯೆನ್ನದೆ ಪ್ರಾಣವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೂಡಲೇ ಸರ್ಕಾರ, ಮುಖ್ಯಮಂತ್ರಿಗಳು ಶಿಷ್ಯ ವೇತನ ನೀಡಬೇಕು. ಅಲ್ಲದೆ ಇವರ ಸೇವೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿ, ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಸದ ಜಿ.ಎಂ. ಸಿದ್ಧೇಶ್ವರ ಹಾಗೂ ಜಿಲ್ಲಾಧಿಕಾರಿಗಳಿಗೆ ಕರವೇ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಎಸ್. ಶ್ರೇಯಸ್, ನಾಗರಾಜ್ ಗೌಡ, ನಾಗರಾಜ ಆದಾಪುರ, ಎಚ್.ಎಂ. ರಾಜೇಶ್, ಅಮರ್ ಜೆ. ಮೊಹಿಯುದ್ದೀನ್, ರಾಮಣ್ಣ ತೆಲಗಿ, ಎಂ.ಡಿ. ಹನೀಫ್, ಖಾಜಿ ನಜೀರ್, ಶಿವಣ್ಣ, ಎನ್. ಸಂತೋಷ್, ಸಂತೋಷ್ ಅಂಗಡಿ ಇನ್ನಿತರರು ಹಾಜರಿದ್ದರು.