ಕೂಡ್ಲಿಗಿ ಮೀಸಲು : ಕೋರ್ಟ್‌ ಮೆಟ್ಟಿಲೇರುವ ಸುಳಿವು

ಕೂಡ್ಲಿಗಿ, ಅ. 14- ಪಟ್ಟಣ ಪಂಚಾಯಿತಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲು ನೀಡಿರುವ ಆದೇಶ ಹೊರ ಬಿದ್ದಿದ್ದು, ಕಳೆದ ಬಾರಿಯೂ ಎರಡೂ ಸ್ಥಾನಗಳು ಮಹಿಳೆ ಯರಿಗೆ ಮೀಸಲಾಗಿದ್ದರಿಂದ ಕೋರ್ಟ್ ಮೊರೆ ಹೋಗಿರುವಂತೆ ಈ ಬಾರಿಯೂ ನ್ಯಾಯಕ್ಕಾಗಿ ಮತ್ತೊಮ್ಮೆ ಕೋರ್ಟ್ ಮೊರೆ ಹೋಗುವ ಸುಳಿವನ್ನು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಎನ್. ಎಂ. ನೂರ್ ಅಹಮದ್ ನೀಡಿದ್ದಾರೆ.

ಕಳೆದ ಬಾರಿ ನಾನು ಪಟ್ಟಣ ಪಂಚಾಯತಿ ಸದಸ್ಯನಾಗಿದ್ದಾಗ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಮೀಸಲಾಗಿತ್ತು. ಇದರ ವಿರುದ್ಧ ನಾನು ಮತ್ತು ಇನ್ನೋರ್ವ ಸದಸ್ಯ ವೆಂಕಟೇಶ್ ಸೇರಿ ಕೋರ್ಟ್ ಮೊರೆ ಹೋಗಲಾಗಿತ್ತು. ಧಾರವಾಡ ಹೈಕೋರ್ಟ್ ಸರ್ಕಾರಕ್ಕೆ ಎರಡು ಸ್ಥಾನ ಮಹಿಳೆಯರಿಗೆ ಮೀಸಲು ಮಾಡುವುದು ಸರಿಯಾದ ಕ್ರಮವಲ್ಲವೆಂದು ಛೀಮಾರಿ ಹಾಕಿತ್ತು. ಆದರೆ, ಈಗ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿಯೊಂದಿಗೆ ಎರಡನೇ ಬಾರಿಯೂ ಇಬ್ಬರು ಮಹಿಳೆಯರಿಗೆ ನೀಡಿದ್ದು, ಮೀಸಲಾತಿ ಕೆಟಗರಿ ವಿರುದ್ಧ ನಮ್ಮ ಆಕ್ಷೇಪವಿಲ್ಲ. ಎರಡೂ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಾಗಿಸಿರುವುದಕ್ಕೆ ನಮ್ಮ ವಿರೋಧವಿದೆ. ಸದ್ಯದಲ್ಲೇ ಧಾರವಾಡ ಹೈಕೋರ್ಟ್ ಮೊರೆ ಹೋಗುವುದಾಗಿ ನೂರ್ ಅಹಮದ್ ಸುಳಿವು ನೀಡಿದ್ದಾರೆ.

error: Content is protected !!