ಮದಕರಿ ನಾಯಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ

ವೀರ ಮದಕರಿ ನಾಯಕರ ಜಯಂತ್ಯೋತ್ಸವದಲ್ಲಿ ಹರಪನಹಳ್ಳಿ ತಾ. ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಉಚ್ಚೆಂಗೆಪ್ಪ

ಹರಪನಹಳ್ಳಿ, ಅ.13 – ಚಿತ್ರದುರ್ಗದ ವೀರ ಮದಕರಿ ನಾಯಕರಿಗೆ ಯುದ್ಧ ಭೂಮಿಯಲ್ಲಿ  ಸರಿಸಾಟಿಯಾದ ವೀರರು ಹಾಗೂ ರಾಜರು ಯಾರೂ ಇರಲಿಲ್ಲ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಹಾಗೂ ಏಕಲವ್ಯ ಸಂಘರ್ಷ ಸಮಿತಿ ವತಿ ಯಿಂದ ರಾಜಾ ವೀರ ಮದಕರಿ ನಾಯಕರ 278ನೇ ಜಯಂ ತ್ಯೋತ್ಸವದ ಅಂಗವಾಗಿ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

17ನೇ ಶತಮಾನದಲ್ಲಿ  ಧೀರ ಶೂರತನಕ್ಕೆ ಹೆಸರಾದ ರಾಜಾ ವೀರ ಮದಕರಿ ನಾಯಕರನ್ನು ನೇರ ಯುದ್ಧದಿಂದ ಗೆಲ್ಲಲು ಕರ್ನಾಟಕದ  ಯಾವುದೇ ಸಂಸ್ಥಾನದಿಂದ ಸಾಧ್ಯವಾಗುತ್ತಿ ರಲಿಲ್ಲ. ಆದರೆ ಹೈದರಾಲಿಯ ಮೋಸದ ಸೂತ್ರಕ್ಕೆ ರಾಜಾ ವೀರ ಮದಕರಿ ನಾಯಕರು ಬಲಿಯಾದರು. ಮದಕರಿ ನಾಯಕರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ ಅವರು ಸರ್ವಧರ್ಮದವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರ ಆಳ್ವಿಕೆಯ ಕಾಲವನ್ನು ಸುವರ್ಣ ಯುಗ ಎಂದು ಕರೆಯುತ್ತಿದ್ದರು. ನಮ್ಮ ನಾಡು ನುಡಿಗಾಗಿ, ಜನರಿಗಾಗಿ ಹೋರಾಡಿದ ಶೂರ, ಧೀರತನಕ್ಕೆ ಹೆಸರಾದ ಮದಕರಿ ನಾಯಕರನ್ನು ಸ್ಮರಣೆ ಮಾಡುವುದು, ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. 

ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಒಡ್ಡಿನ ದಾದಾಪುರದ ಶಿವಾನಂದ್, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ್, ನ್ಯಾಯವಾದಿ ನೀಲಗುಂದ ಟಿ.ಮನೋಜ್ ಮಾತನಾಡಿದರು. 

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಸಂಘಟನಾ ಕಾರ್ಯದರ್ಶಿ ಮಾಳಗಿ ತಿಮ್ಮೇಶ್, ಏಕಲವ್ಯ ಸಂಘರ್ಷ ಸಮಿತಿ (ಇಎಸ್‍ಎಸ್) ಯ ಅಧ್ಯಕ್ಷ ರಾಯದುರ್ಗದ ಪ್ರಕಾಶ್, ನಿಟ್ಟೂರು ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಹೇಳಿಕೊಳ್ಳಲು ಮಾತ್ರದೊಡ್ಡ ಸಮಾಜ ಎನ್ನುವುದು ಬಿಟ್ಟರೇ ಪಟ್ಟಣದಲ್ಲಿ ಸಮಾಜದ ಮಹರ್ಷಿ ವಾಲ್ಮೀಕಿ, ಮದಕರಿ ನಾಯಕರ ಪ್ರತಿಮೆಗಳು ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಕೋಟೆ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪಟ್ನಾಮದ ವೆಂಕಟೇಶ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ತಳವಾರ ಚಂದ್ರಪ್ಪ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ಆಲೂರು ಶ್ರೀನಿವಾಸ, ಮ್ಯಾಕಿ ದುರ್ಗಪ್ಪ, ಗುಂಡಗತ್ತಿ ಅರವಿಂದ್, ನಂದಿಬೇವೂರು ರಾಜಪ್ಪ, ಮಾರುತಿ ಮೈದೂರು, ಹರಿಯಮ್ಮನಹಳ್ಳಿ ಮಂಜುನಾಥ, ಶಿವರಾಜ್, ಏಕಲವ್ಯ ಸಂಘರ್ಷ ಸಮಿತಿ (ಇಎಸ್‍ಎಸ್) ಯ ರಂಗಾಪುರ ಕ್ಯಾಂಪ್‍ನ ತಳವಾರ ಶಿವರಾಜ, ಮೈದೂರಿನ ಪರಶುರಾಮ್, ಹರಪನಹಳ್ಳಿಯ ಗಿಡ್ಡಳ್ಳಿ ವಿಜಯ್‍ಕುಮಾರ್, ಜಿ.ದಾದಾಪುರದ ಹರೀಶ ಸೇರಿದಂತೆ, ಪಟ್ನಾಮದ ಮಂಜುನಾಥ, ರಾಯದುರ್ಗದ ಚಂದ್ರು, ಮ್ಯಾಕಿ ಕರಿಬಸವರಾಜ, ಗಿಡ್ಡಳ್ಳಿ ತಿಮ್ಮಣ್ಣ ಸೇರಿದಂತೆ ಮತ್ತಿತರರಿದ್ದರು.

error: Content is protected !!