ಜಗಳೂರು, ಅ. 13- ಛಲವಾದಿ ಸಮು ದಾಯದ ಅಭಿವೃದ್ಧಿಗೆ ಅಗತ್ಯ ನೆರವು ನೀಡುವು ದಾಗಿ ಶ್ರೀ ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ
ಅವರು ಮಾತನಾಡಿದರು.
ಛಲವಾದಿ ಸಮುದಾಯ ತಾಲ್ಲೂಕಿನಲ್ಲಿ ಅಲ್ಪ ಸಂಖ್ಯಾತ ಸಮುದಾಯವಾಗಿದ್ದು, ಸಮಾಜದವರು ಮುಖ್ಯವಾಹಿನಿಗೆ ಬರಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಡಾ. ಜಗನ್ನಾಥ ಮಾತನಾಡಿ, ಹಿರಿಯರಿಂದ ಕಟ್ಟಿ, ಬೆಳೆಸಿದ ಸಮುದಾಯ ಒಡೆದು ಚೂರಾಗಬಾರದು.
ಸಾಮಾಜಿಕ ವ್ಯವಸ್ಥೆ ಅವ್ಯವಸ್ಥೆಯಾದರೆ, ಅಭಿವೃದ್ಧಿ ಅಸಾಧ್ಯ. ಹಿರಿಯ ರಾಜಕಾರಣಿ ಬಸವಲಿಂಗಪ್ಪನವರಂತಹ ಮುತ್ಸದ್ಧಿ ರಾಜಕಾರಣಿ ಕಾಲವಾದ ನಂತರ ನಮ್ಮ ಸಮುದಾಯ ಅನಾಥವಾಗಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ವರಿಷ್ಠಾಧಿಕಾರಿ ರುದ್ರಮುನಿ, ಬಿಸ್ತುವಳ್ಳಿ ವಿಎಸ್ಸೆಸ್ಸೆನ್ ಅಧ್ಯಕ್ಷ ಬಾಬು, ಮುಖಂಡ ಬಿದರಕೆರೆ ರವಿ, ಪತ್ರಕರ್ತ ಅಣಬೂರು ಮಠದ ಕೊಟ್ರೇಶ್, ಛಲವಾದಿ ಸಮಾಜದ ಗೌರವಾಧ್ಯಕ್ಷ ಸಿ. ಲಕ್ಷ್ಮಣ, ಅಧ್ಯಕ್ಷರಾದ ನಿಜಲಿಂಗಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂಜಿನಪ್ಪ, ಮುಖಂಡ ನಾಗಲಿಂಗಪ್ಪ, ಧನ್ಯಕುಮಾರ್, ಕೆಂಚಮ್ಮ, ಸಮಾಜದ ಮುಖಂಡರಾದ ವೀರಸ್ವಾಮಿ ಮತ್ತಿತರರು ಹಾಜರಿದ್ದರು.