ಭದ್ರಾ ಬಲದಂಡೆಗೆ 15 ರಿಂದ ನೀರು ಹರಿಸಲು ಒತ್ತಾಯ

ಭದ್ರಾ ಬಲದಂಡೆಗೆ 15 ರಿಂದ ನೀರು ಹರಿಸಲು ಒತ್ತಾಯ - Janathavaniದಾವಣಗೆರೆ, ಜು.8 – ಭದ್ರಾ ಜಲಾಶಯದಿಂದ ಇದೇ ದಿನಾಂಕ 15 ರಿಂದಲೇ ಬಲದಂಡೆಗೆ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟ ಒತ್ತಾಯಿ ಸಿದೆ. ಈಗಾಗಲೇ ಕ್ಯಾಚ್‌ಮೆಂಡ್ ಏರಿಯಾದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದ್ದು, 12,759 ಕ್ಯೂಸೆಕ್ಸ್‌ ಒಳಹರಿವು ಬರುತ್ತಿದೆ. ಪ್ರಸಕ್ತ ಅಣೇಕಟ್ಟೆ ಯಲ್ಲಿ 30 ಟಿಎಂಸಿ ನೀರಿದ್ದು, ಅದರಲ್ಲಿ ಬಳಕೆಗೆ ಬರುವ 20 ಟಿಎಂಸಿ ನೀರನ್ನು ಬಳಸಿದರೆ, 80 ದಿನಗಳವರೆಗೆ ಸಾಕಾಗುವಷ್ಟು ನೀರಿದೆ.

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅಧಿಕ ಮಳೆ ಸಾಧ್ಯತೆ ಇದ್ದು, ಪ್ರತಿವರ್ಷದಂತೆ ಅಣೆಕಟ್ಟೆ ಭರ್ತಿಯಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್.ಲಿಂಗರಾಜ್ ಹೇಳಿದ್ದಾರೆ.

ಹಾಲಿ ಇರುವ ನೀರನ್ನು ಹಂಗಾಮಿಗೆ ಬಳಕೆ ಮಾಡಿಕೊಂಡು ನಂತರ ಬರುವ ನೀರನ್ನು ಅಣೆಕಟ್ಟೆ ಯಲ್ಲಿ ಸಂಗ್ರಹಿಸಬಹುದಾಗಿದೆ. ಸಲಹಾ ಸಮಿತಿ ಕೂಡಲೇ ತೀರ್ಮಾನ ಕೈಗೊಂಡು ಬಲದಂಡೆಗೆ ನೀರು ಬಿಡಲು ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

error: Content is protected !!