ವೈದ್ಯ ವಿದ್ಯಾರ್ಥಿಗಳ ಸಂಕಷ್ಟದ ಬೀದಿ ನಾಟಕ ಅನಾವರಣ

ದಾವಣಗೆರೆ.ಜು.7- ಶಿಷ್ಯ ವೇತನಕ್ಕಾಗಿ ವೈದ್ಯ ವಿದ್ಯಾರ್ಥಿಗಳು ಅನಿರ್ದಿ ಷ್ಟಾವಧಿ ಮುಷ್ಕರವನ್ನು 9ನೇ ದಿನವಾದ ಇಂದು ಕೈಗೊಂಡಿದ್ದರು.

ನಗರದ ಜಯದೇವ ಮುರುಘ ರಾಜೇಂದ್ರ ವೃತ್ತದಲ್ಲಿ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಮುಷ್ಕರ ನಡೆಸಿದರಲ್ಲದೇ, ಸಂಜೆ ವೇಳೆ ಮಳೆಯನ್ನೂ ಲೆಕ್ಕಿಸದೇ ನೆನೆಯುತ್ತಾ ವಿಶೇಷವಾಗಿ ಶಿಷ್ಯ ವೇತನಕ್ಕಾಗಿ ತಮ್ಮ ಹೋರಾಟ, ಅನುಭವಿಸುತ್ತಿರುವ ಪರದಾಟ, ಸಂಕಟವನ್ನು ಬಿಂಬಿಸುವ ಬೀದಿ ನಾಟಕ ಅನಾವರಣಗೊಳಿಸಿ ಸರ್ಕಾರದ ಗಮನ ಸೆಳೆದರು.

ವೈದ್ಯರಾಗುವ ಕನಸು ಹೊತ್ತು ಮೆರಿಟ್‌ನಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು, ಅದಕ್ಕಾಗಿ ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಸಾಲ-ಸೋಲ ಮಾಡಿ ಹಣ ಹೊಂದಿಸಿ ಕೊಡುವುದು ನಂತರ ಹಗಲು-ರಾತ್ರಿಯನ್ನದೇ ಓದಿ ಇನ್ನೇನು ವೈದ್ಯರಾಗಲು ಕೊನೆ ಮೆಟ್ಟಿಲು ಹತ್ತುವ ಸಮಯದಲ್ಲಿ ಶಿಷ್ಯ ವೇತನಕ್ಕಾಗಿ ಅಲೆಯುವ, ಹೋರಾಟಕ್ಕಿಳಿಯುವ ಹೀಗೆ ಪ್ರಸ್ತುತ ತಾವು ಅನುಭವಿಸುತ್ತಿರುವ ನೋವು, ಸಂಕಟಗಳನ್ನು ಮುಷ್ಕರ ನಿರತ ವಿದ್ಯಾರ್ಥಿಗಳು ನಾಟಕದ ಮುಖೇನ ಪ್ರದರ್ಶಿಸಿದರು.

ಈ ವೇಳೆ ಚೀನಾ ವಿರುದ್ದ ಹೋರಾಡುತ್ತಿರುವ ಯೋಧರಿಗೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯ ಯೋಧರಿಂದ ನಮನ ಸಲ್ಲಿಸಲಾಯಿತು. 

error: Content is protected !!