ಅಧಿಕಾರಿಗಳಿಂದಷ್ಟೇ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ, ಸಾರ್ವಜನಿಕರ ಸಹಕಾರ ಅಗತ್ಯ

ಹರಪನಹಳ್ಳಿ ತಾ.ಪಂ. ಕೆಡಿಪಿ ಸಭೆ

ಹರಪನಹಳ್ಳಿ, ಜು.7- ಕೊರೊನಾ ಭೀತಿಯಲ್ಲಿ ಕುರಿ ಸಂತೆ ಯನ್ನು ಎಲ್ಲೆಂದರಲ್ಲಿ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಡೆದಿದೆ.

ಪಟ್ಟಣದ ತಾಲ್ಲೂಕು ಪಂಚಾ ಯಿತಿಯ ರಾಜೀವಗಾಂಧಿ ಸಭಾಂಗ ಣದಲ್ಲಿ ತಾಪಂ ಅಧ್ಯಕ್ಷೆ ಅನ್ನಪೂ ರ್ಣಮ್ಮ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿತು.  ಪ್ರತಿ ಸೋಮವಾರ ಕೊಟ್ಟೂರು ರಸ್ತೆಯ ಅಗ್ನಿಶಾಮಕ ಠಾಣೆಯ ಪಕ್ಕದಲ್ಲಿ ಕುರಿ ಸಂತೆ ನಡೆಯುತ್ತಿತ್ತು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಕುರಿ ಸಂತೆ ಸ್ಥಗಿತಗೊಳಿಸಲಾಗಿತ್ತು. ಆದರೆ ರೈತರು, ಕುರಿ ಮಾರಾಟಗಾರರು ಬೇರೆ ಸ್ಥಳವಿಲ್ಲದೇ ಸೋಮವಾರ ಕೆಎಚ್‍ಬಿ ಕಾಲೋನಿಯಲ್ಲಿ ಕುರಿ ಸಂತೆಯನ್ನು ನಡೆಸಿದರು. ಇದಕ್ಕೆ ಸಾರ್ವಜನಿಕರು, ಸ್ಥಳೀಯರು ವಿರೋಧಿಸಿದ ಹಿನ್ನೆಲೆಯಲ್ಲಿ ತಾ.ಪಂ. ಸಭೆಯಲ್ಲಿ ಅಧ್ಯಕ್ಷೆ ಅನ್ನಪೂ ರ್ಣಮ್ಮ, ಉಪಾಧ್ಯಕ್ಷ ಮಂಜ್ಯಾ ನಾಯ್ಕ, ಎಪಿಎಂಸಿ ಕಾರ್ಯದರ್ಶಿಗೆ ಯಾಕೆ ಹೀಗೆ ಎಂದು ದೂರವಾಣಿ ಮೂಲಕ ಸಭೆಗೆ ಬಂದು ಮಾಹಿತಿ ನೀಡಲು ಕೋರಿದರು.

ಸಭೆಯ ಮಧ್ಯದಲ್ಲಿ ಎಪಿಎಂಸಿ ಕಾರ್ಯದರ್ಶಿ ವೀರಣ್ಣ ಆಗಮಿಸಿ ನಾವು ತಹಶೀಲ್ದಾರರಿಗೆ ಮನವಿ ಮಾಡಿದ್ದೇವೆ, ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲ, ತಹಶೀಲ್ದಾರರು ಅನುಮತಿ ನೀಡಿಲ್ಲ, ರೈತರೇ ಸ್ವತಃ ಕುರಿ ಸಂತೆಯನ್ನು ಬೇರೆ ಕಡೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಸಂಬಂಧಿಸಿದ ಅಧಿಕಾರಿಗೆ ಸಾಮಾಜಿಕ ಅಂತರ ಕಾಪಾಡಿ ಕೊಂಡು ಕುರಿ ಸಂತೆ ಮಾಡಲು ಅನುಮತಿ ನೀಡುವಂತೆ ತಿಳಿಸಿದರು.

ಸಾರ್ವಜನಿಕರ ಪಾತ್ರ ಮಹತ್ವದ್ದು : ಬರೀ ಅಧಿಕಾರಿಗಳಿಂದ ಮಾತ್ರ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗಿದ್ದು, ಸ್ವಯಂ ಪ್ರೇರಿತ ವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾ ಡಿಕೊಂಡು ಕೋವಿಡ್-19 ತಡೆಗ ಟ್ಟಲು ಮುಂದಾಗಬೇಕು ಎಂದು ತಾಲ್ಲೂಕು ಆರೋಗ್ಯಾ ಧಿಕಾರಿ ಡಾ.ಶಿವಕುಮಾರ್ ಮನವಿ ಮಾಡಿದರು.

ಸಾರ್ವಜನಿಕರ ಹಿತದೃಷ್ಠಿ ಗಂಟಲು ದ್ರವ ಪರೀಕ್ಷೆ ಮಾಡಿದವರಿಗೆ ವರದಿ ಬರುವ ಮೊದಲೇ ಬಿಡುಗಡೆ ಮಾಡುವ ಬದಲು ವರದಿ ಬಂದ ನಂತರ ಖಚಿತ ಪಡಿಸಿಕೊಂಡು ಅವರನ್ನು ಬಿಡುಗಡೆ ಮಾಡಬೇಕು. ಇದರಿಂದ ಸಾರ್ವಜನಿಕರಲ್ಲಿ ಭಯ ಹಾಗೂ ಅನಗತ್ಯ ವದಂತಿಗಳಿಗೆ ಕಡಿವಾಣ ಬೀಳಲಿದೆ ಎಂದು ಉಪಾಧ್ಯಕ್ಷ ಮಂಜಾನಾಯ್ಕ ಆರೋಗ್ಯಾಧಿಕಾರಿಗೆ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೋಂದಿ ಮಾತನಾಡಿ, ತಾಲ್ಲೂಕಿನಲ್ಲಿ 223 ಮಿ.ಮೀ ಮಳೆಯಾಗಬೇಕಾಗಿದ್ದು, 244 ಮಿ.ಮೀ ನಷ್ಟು ಉತ್ತಮವಾದ ಮಳೆಯಾಗಿದೆ. ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದು, 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 61487 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.73% ಗುರಿ ಸಾಧಿಸಲಾಗಿದೆ. ಮೆಕ್ಕೆಜೋಳಕ್ಕೆ ಲದ್ದಿ ಹುಳು ಕಾಣಿಸಿಕೊಂಡಲ್ಲಿ ರೈತರು ರೈತ ಸಂಪರ್ಕ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆ ವಿಮೆ ಆರಂಭವಾಗಿದ್ದು, ರೈತರು ಸಕಾಲದಲ್ಲಿ ಬೆಳೆ ವಿಮೆ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.

ನಾಡಿದ್ದು ದಿನಾಂಕ 9 ಮತ್ತು 10ರಂದು ಗ್ರಾಮ ಪಂಚಾಯಿತಿ ಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡವರಿಗೆ ಎರಡು ದಿನಗಳ ಕಾಲ ತರಬೇತಿ ಕಾರ್ಯಾ ಗಾರ ನಡೆಯಲಿದೆ ಎಂದು ತಾಪಂ ಇಓ ಅನಂತರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚನಗೌಡ, ವಿಜಯ್‌ಕುಮಾರ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!