ಖಾಸಗಿ ಶಾಲೆಗಳ ಒಕ್ಕೂಟ ಅಸ್ತಿತ್ವಕ್ಕೆ

ಖಾಸಗಿ ಶಾಲೆಗಳ ಒಕ್ಕೂಟ ಅಸ್ತಿತ್ವಕ್ಕೆ - Janathavani

 

ಉಮಾಪತಯ್ಯ ಅಧ್ಯಕ್ಷ, ಶ್ರೀರಾಮಮೂರ್ತಿ ಪ್ರಧಾನ ಕಾರ್ಯದರ್ಶಿ

ದಾವಣಗೆರೆ,ಜು.7- ಜಿಲ್ಲೆಯಲ್ಲಿ ನೂತನವಾಗಿ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಒಕ್ಕೂಟದ ಅಧ್ಯಕ್ಷರಾಗಿ ಸೇಂಟ್ ಜಾನ್ಸ್ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಸಪ್ತಗಿರಿ ವಿದ್ಯಾಸಂಸ್ಥೆ ಟ್ರಸ್ಟಿ ಸಿ.ಶ್ರೀರಾಮಮೂರ್ತಿ ಮತ್ತು ಖಜಾಂಚಿಯಾಗಿ ಕೂಲಂಬಿ ಗ್ರಾಮದ ನ್ಯಾಷನಲ್ ಪಬ್ಲಿಕ್ ಶಾಲೆ ವ್ಯವಸ್ಥಾಪಕ ಟ್ರಸ್ಟಿ ವಿಜಯರಾಜ್ ಆಯ್ಕೆಯಾಗಿದ್ದಾರೆ.

ಖಾಸಗಿ ಶಾಲೆಗಳು ಆಡಳಿತಾತ್ಮಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳ ಬಗ್ಗೆ ಧ್ವನಿ ಎತ್ತುವ ನಿಟ್ಟಿನಲ್ಲಿ ಈ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಉಮಾಪತಯ್ಯ ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನ, ಅರಿವು, ಕೌಶಲ್ಯ, ಪ್ರಾಮಾಣಿಕತೆ, ಆದರ್ಶ, ಧರ್ಮ, ಶಾಂತಿ, ಅಹಿಂಸೆಯಂತಹ ಮೌಲ್ಯಗಳನ್ನು ಹಿಂದಿನಿಂದಲೂ ಕಲಿಸುತ್ತಾ ಬರುತ್ತಿದ್ದು, ಇವುಗಳೊಂದಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆ ಸಲ್ಲಿಸುವುದು ಒಕ್ಕೂಟದ ಸದುದ್ದೇಶವಾಗಿದೆ ಎಂದವರು ಹೇಳಿದ್ದಾರೆ.

ಪದಾಧಿಕಾರಿಗಳು : ಮಿಲ್ಲತ್ ಶಾಲೆಯ ಸೈಯದ್ ಸೈಫುಲ್ಲಾ, ಸಿದ್ದಗಂಗಾ ವಿದ್ಯಾಸಂಸ್ಥೆಯ ಶ್ರೀಮತಿ ಜಸ್ಟಿನ್ ಡಿಸೋಜಾ, ವಿಶ್ವಚೇತನ ವಿದ್ಯಾನಿಕೇತನದ ಶ್ರೀಮತಿ ವಿಜಯಲಕ್ಷ್ಮಿ ವೀರಮಾಚನೇನಿ ಮಹಾಪೋಷಕರಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಆರ್.ಎಲ್. ಪ್ರಭಾಕರ್, ಎಂ.ಎಸ್ .ಸಂತೋಷ್ ಕುಮಾರ್, ಸಹ ಕಾರ್ಯದರ್ಶಿಗಳಾಗಿ ಎಸ್.ಕೆ. ಮಂಜುನಾಥ್, ಎ.ಎನ್. ಪ್ರಸನ್ನ ಕುಮಾರ್, ಸಂಘಟನಾ ಕಾರ್ಯ ದರ್ಶಿಗಳಾಗಿ ಬಿ.ಕೆ. ಪೃಥ್ವಿರಾಜ್, ಕೆ.ಸಿ. ಮಂಜು ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳು : ಶ್ರೀಮತಿ ಸಹನಾ ರವಿ, ಕೆ.ಸಿ.ಲಿಂಗರಾಜ್ ಆನೆಕೊಂಡ, ಹೆಚ್. ಜಯಣ್ಣ, ವಿಜಯಕುಮಾರ್, ಡಿ.ವಿ.ನಾಗರಾಜ ಶೆಟ್ಟಿ, ಶಶಿಧರ್, ಟಿ.ಎಂ. ನಾಗರಾಜಯ್ಯ, ಹೆಚ್.ಜೆ.  ಮೈನುದ್ದೀನ್, ಕೆಂಚನಹಳ್ಳಿ ಗೌಡ್ರ ಕೃಷ್ಣ, ಹರಿಹರ ತಾಲ್ಲೂಕಿನ ಕೆ.ಸುರೇಶ್, ಹೊನ್ನಾಳಿ ತಾಲ್ಲೂಕಿನ ಬಿ.ಆರ್. ರವಿ, ಚನ್ನಗಿರಿ ತಾಲ್ಲೂಕಿನ ಪಿ.ಎಸ್ .ಅರವಿಂದ್, ಜಗಳೂರು ತಾಲ್ಲೂಕಿನ ಕೆ.ಎಸ್. ಪ್ರಭು ಕುಮಾರ್.

error: Content is protected !!