ರಸ್ತೆ ಬದಿ ವೈದ್ಯಕೀಯ ತ್ಯಾಜ್ಯ ಎಸೆದರೆ ಕಾನೂನು ಕ್ರಮ

ದಾವಣಗೆರೆ ಜು. 6   ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಕ್ಲಿನಿಕ್, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಿಂದ ಉತ್ಪತ್ತಿಯಾಗುವ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ವಿಲೇವಾರಿಗಾಗಿ ಸಾಮೂಹಿಕ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳ ಸಂಸ್ಕರಣಾ ಘಟಕವಾದ ಸುಶಾಂತ್ ಎನ್ವಿರಾಮೆಂಟಲ್ ಟೆಕ್ನಾಲಜೀಸ್, ಅಮರಾವತಿ ಇವರಿಗೆ ನೀಡುವುದು ಕಡ್ಡಾಯವಾಗಿರುತ್ತದೆ. 

ಜೀವ ವೈದ್ಯಕೀಯ ವಸ್ತುಗಳಾದ ಪ್ಲಾಸ್ಟಿಕ್, ಟ್ಯೂಬ್, ಕ್ಯಾಥಟರ್ಸ್, ಗ್ಲುಕೋಸ್ ಬಾಟಲ್‍ಗಳನ್ನು ಗುಜರಿ ಅಂಗಡಿಗಳಿಗೆ ನೀಡಬಾರದಾಗಿ ತಿಳಿಸಲಾಗಿಸದೆ. ತಪ್ಪಿದಲ್ಲಿ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ, ಗುಜರಿ ಅಂಗಡಿಗಳ ವಿರುದ್ಧ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳ ನಿಯಮಗಳು, ಪರಿಸರ ಸಂರಕ್ಷಣಾ ಕಾಯ್ದೆ, 1986 ರಡಿಯಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು

ಜಿಲ್ಲೆಯಾದ್ಯಂತ ರಸ್ತೆಗಳ ಬದಿಯಲ್ಲಿ ಖಾಲಿ ಜಾಗದಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ಎಸೆದಿರುವುದನ್ನು ಕಂಡು ಬಂದರೆ ಕೂಡಲೇ ಸುಶಾಂತ್ ಎನ್ವಿರಾಮೆಂಟಲ್ ಟೆಕ್ನಾಲಜೀಸ್  ನ ಸಂತೋಷ್ (9964690358) ಅವರಿಗೆ ತಿಳಿಸುವಂತೆ ಪರಿಸರ ಅಧಿಕಾರಿ ಕೆ.ಬಿ ಕೊಟ್ರೇಶ್ ತಿಳಿಸಿದ್ದಾರೆ.

error: Content is protected !!