ಪೊಲೀಸ್ ಕಸ್ಟೋಡಿಯಲ್ ಡೆತ್ – ಯುವತಿ ಅತ್ಯಾಚಾರ, ಕೊಲೆಗೆ ಖಂಡನೆ
ದಾವಣಗೆರೆ, ಅ.9- ಹತ್ರಾಸ್ನಲ್ಲಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಮಾಯಕೊಂಡದ ಪೊಲೀಸ್ ಠಾಣೆಯಲ್ಲಿ ನಡೆದ ಪೊಲೀಸ್ ಕಸ್ಟೋಡಿಯಲ್ ಡೆತ್ ಖಂಡಿಸಿ ತಾಲ್ಲೂಕಿನ ಮಾಯಕೊಂಡದಲ್ಲಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮೆರವಣಿಗೆ ನಂತರ ಉಪ ತಹಶೀಲ್ದಾರ್ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಕಸ್ಟೋಡಿಯಲ್ ಡೆತ್ ಪ್ರಕರಣದಲ್ಲಿ ಮರುಳಸಿದ್ಧಪ್ಪನ ಕುಟುಂಬಕ್ಕೆ 5 ಎಕರೆ ಜಮೀನು, ಕುಟುಂಬದ ಸದಸ್ಯರ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.
ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಓಬಳಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಡಾ. ವೈ. ರಾಮಪ್ಪ, ವೆಂಕಟೇಶ್, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಅಣಜಿ ಅಂಜಿನಪ್ಪ, ಹರೋಸಾಗರ ಪ್ರಕಾಶ್ ಸೇರಿದಂತೆ ಇತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ವೆಂಕಟೇಶ್, ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಣ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಶಂಭುಲಿಂಗಪ್ಪ, ಶ್ಯಾಗಲೆ ಸತೀಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹಾಲೇಶಪ್ಪ, ಕಂದಗಲ್ ಬಾಬಣ್ಣ, ರಾಮಗೊಂಡ ನಹಳ್ಳಿ ಶರಣಪ್ಪ, ಆನಗೋಡು ಕರಬಸಪ್ಪ, ಬಸವರಾಜ್, ಮ್ಯಾಸರಹಳ್ಳಿ ಪ್ರಭು, ಹೂವಿನ ಮಡು ಹಾಲೇಶಪ್ಪ, ಅತ್ತಿಗೆರೆ ನಂದ್ಯೆಪ್ಪ, ಗುಮ್ಮನೂರು ಲೋಕೇಶ್, ಸಿದ್ದನೂರು ಪ್ರಕಾಶ್, ಸದಾಶಿವಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.