ಬ್ಯಾಂಕ್ ಖಾತೆ – ಒಟಿಪಿ ವಿವರದಿಂದ ವಂಚನೆ
ದಾವಣಗೆರೆ, ಜು.3- ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಸೋಗಿನಲ್ಲಿ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ನಂಬರ್, ಒಟಿಪಿ ನಂಬರ್ ಪಡೆದು ಪ್ರತಿಷ್ಠಿತ ಬಟ್ಟೆ ಅಂಗಡಿಯೊಂದರ ಸೇಲ್ಸ್ ಮ್ಯಾನ್ ಖಾತೆಯಲ್ಲಿದ್ದ 39 ಸಾವಿರಕ್ಕೂ ಅಧಿಕ ಹಣವನ್ನು ಆನ್ ಲೈನ್ ಮುಖೇನ ದೋಚಿ ವಂಚಿಸಿರುವ ಘಟನೆ ಇಲ್ಲಿನ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯರಗುಂಟೆಯ ಜಿ.ಎಂ. ಮಹಾಸ್ವಾಮಿ ಮೋಸ ಹೋದ ಸೇಲ್ಸ್ ಮ್ಯಾನ್. ಕಾರ್ಪೊ ರೇಷನ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರು. ಆರ್ ಟಿಓ ಕಛೇರಿ ಬಳಿ ಮತ್ತು ಎವಿಕೆ ಕಾಲೇಜು ಬಳಿಯ ಬೇರೊಂದು ಬ್ಯಾಂಕ್ ಗಳ ಎಟಿಎಂ ಗಳಲ್ಲಿ ಇದೇ ದಿನಾಂಕ 1ರಂದು 20 ಸಾವಿರ ಹಣ ಡ್ರಾ ಮಾಡಲು ಪ್ರಯತ್ನಿಸಿದ್ದು, ಆಗ ಹಣ ಬಂದಿಲ್ಲ. ಆದರೆ ಹಣ ಕಟಾವ್ ಆದ ಬಗ್ಗೆ ಖಾತೆ ಇರುವ ಬ್ಯಾಂಕಿಗೆ ಲಿಂಕ್ ಆದ ನನ್ನ ಮೊಬೈಲ್ ಗೆ ಸಂದೇಶ ಬಂದಾಗ, 2ರಂದು ಖಾತೆಯುಳ್ಳ ಬ್ಯಾಂಕ್ ನ ಕಸ್ಟಮರ್ ಕೇರ್ ಗೆ ದೂರವಾಣಿ ಮುಖೇನ ಸಂಪರ್ಕಿಸಿದಾಗ, ಸಮಸ್ಯೆ ಹೇಳಿ ಕೊಂಡು ಅವರ ಸೂಚಿಸಿದಂತೆ ಬ್ಯಾಂಕ್ ಖಾತೆ ನಂಬರ್ ತಿಳಿಸುತ್ತಿರುವಾಗ ಕರೆ ಕಟ್ ಆಯಿತು.
ನಂತರ ಅಪರಿಚಿತ ವ್ಯಕ್ತಿ ನನಗೆ ದೂರವಾಣಿ ಮುಖೇನ ಸಂಪರ್ಕಿಸಿದಾಗ ನಾನು ಕರೆ ಸ್ವೀಕರಿಸಲಿಲ್ಲ. ಆದರೆ, ಪುನಃ ನಾನೇ ಕರೆ ಮಾಡಿದಾಗ ಹಿಂದಿ ಭಾಷೆಯಲ್ಲಿ ಮಾತನಾಡಿದ ಅಪರಿಚಿತನು ತಾನು ಕಾರ್ಪೊರೇಷನ್ ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ನಂಬಿಸಿ ನನ್ನ ಖಾತೆಗೆ ಸಂಬಂಧಿಸಿದ ಎಟಿಎಂ ಕಾರ್ಡ್ ವಿವರ ಪಡೆದಿದ್ದಲ್ಲದೇ, 4 ಬಾರಿ ನನ್ನ ಮೊಬೈಲ್ ಗೆ ಬಂದ ಒಟಿಪಿ ನಂಬರ್ ಗಳನ್ನೂ ಸಹ ಪಡೆದಿದ್ದು, ಸ್ವಲ್ಪ ಸಮಯದಲ್ಲಿ ನನ್ನ ಖಾತೆಯಿಂದ 4 ಬಾರಿ ಒಟ್ಟು 39 ಸಾವಿರದ 996 ಹಣ ಕಟಾವ್ ಆಗಿರುವು ದಾಗಿ ಮಹಾಸ್ವಾಮಿ ದೂರಿನಲ್ಲಿ ವಿವರಿಸಿದ್ದಾರೆ.