ದಾವಣಗೆರೆ, ಜು. 3 – ಜಿಲ್ಲೆಯಲ್ಲಿ ಇಂದು ಐದು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇದೇ ದಿನದಂದು 13 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಗರದ ಬೇತೂರು ರಸ್ತೆಯ ನಿವಾಸಿ 80 ವರ್ಷದ ವೃದ್ಧರೊಬ್ಬರು ಕೊರೊನಾ ಸೋಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ. ಹೊನ್ನಾಳಿಯ ಕ್ಯಾಸಿನಕೆರೆಯ ಇಬ್ಬರು. ಆಜಾದ್ ನಗರದ ಒಬ್ಬರು ಹಾಗೂ ಹರಪನಹಳ್ಳಿ ಮತ್ತು ಹಾವೇರಿಯ ಕನವಳ್ಳಿಯಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಹರಿಹರದ ಆರು ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ ದಾವಣಗೆರೆಯ ಐವರು, ಚನ್ನಗಿರಿ ಮತ್ತು ನ್ಯಾಮತಿಯ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 44ಕ್ಕೆ ಇಳಿಕೆಯಾಗಿದೆ. ಮೃತರ ಸಂಖ್ಯೆ 9ಕ್ಕೆ ತಲುಪಿದೆ.