60 ವರ್ಷ ಮೇಲ್ಪಟ್ಟವರಿಗೆ ಆರ್‌ಟಿಓ ಪ್ರವೇಶ ಇಲ್ಲ

ದಾವಣಗೆರೆ, ಜು.2- ಕೋವಿಡ್-19 ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆದೇಶದಂತೆ ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಾವಳಿ 1989 ಇವುಗಳಿಗೆ ಸಂಬಂಧಿಸಿದಂತೆ ದಿನಾಂಕ 01-02-2020 ರ ನಂತರ ಅವಧಿ ಮುಕ್ತಾಯಗೊಳ್ಳುವ ವಾಯಿದೆಯನ್ನು ಸಿಂಧುತ್ವ ಹೊಂದಿದ ಅವಧಿ ಎಂದು ಪರಿಗಣಿಸಿ ದಿ. 30-09-2020 ರವರೆಗೆ ವಿಸ್ತರಿಸಲಾಗಿರುತ್ತದೆ. (ಅರ್ಹತಾ ನವೀಕರಣ, ಪರವಾನಗಿ, ಎಲ್.ಎಲ್, ಡಿ.ಎಲ್, ನೋಂದಣಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಇತರೆ).

ಆದ ಕಾರಣ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಆಗಮಿಸುತ್ತಿದ್ದಾರೆ. ಡಿ.ಎಲ್ ನವೀಕರಣ ಮತ್ತು ಡಿ.ಎಲ್ ಗೆ ಸಂಬಂಧಿಸಿದ ಇತರೆ ಕೆಲಸಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ಸಹಿ ಮತ್ತು ಬಯೋಮೆಟ್ರಿಕ್ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಡಿ.ಎಲ್ ಹಾಗೂ ಇತರೆ ಸೇವೆಗಳಿಗೆ ಹಾಜರಾಗದಂತೆ ತಿಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ತಿಳಿಸಿದ್ದಾರೆ.

error: Content is protected !!