ಮಲೇಬೆನ್ನೂರು, ಜು.1- ಪಟ್ಟಣ ದಲ್ಲಿ ಕೊರೊನಾ ಸೋಂಕು ಹರಡ ದಂತೆ ಸದಾ ಕಾರ್ಯೋನ್ಮುಖರಾಗಿರುವ ಪುರಸಭೆಯ ಪೌರ ಕಾರ್ಮಿಕರಿಗೆ, ಪೊಲೀಸ್ ಠಾಣೆಯ ಸಿಬ್ಬಂದಿಗೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಉದ್ಯಮಿ ನಂದಿಗಾವಿ ಶ್ರೀನಿವಾಸ್ ಅವರು ಮಂಗಳವಾರ ಹೆಲ್ತ್‌ಕಿಟ್ ವಿತರಣೆ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಪಿಎಸ್‌ಐ ವೀರಬಸಪ್ಪ, ಪುರಸಭೆ ಸದಸ್ಯರಾದ ಮಾಸಣಗಿ ಶೇಖರಪ್ಪ, ದಾದಾವಲಿ, ಕೆ.ಪಿ. ಗಂಗಾಧರ್, ಪಿ.ಆರ್. ಕುಮಾರ್, ಪಿ.ಆರ್. ರಾಜು, ಶಿಕ್ಷಕ ಜಿಗಳಿಯ ಡಿ.ಹೆಚ್. ನಾಗರಾಜ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಉಮೇಶ್, ನವೀನ್ ಮತ್ತಿತರರು ಈ ವೇಳೆ ಹಾಜರಿದ್ದರು.