ಭೂ ಸುಧಾರಣೆ, ಬೀಜ ಕಾಯ್ದೆಗಳ ತಿದ್ದುಪಡಿ ಕೈ ಬಿಡಲು ಆಗ್ರಹ

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನಾ ಧರಣಿ

ದಾವಣಗೆರೆ, ಜೂ.29- ರೈತ ವಿರೋಧಿ ನೀತಿಗಳಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಕಾರ್ಪೊರೇಟ್ ಹಿಮ್ಮೆಟ್ಟಿಸಿ ರೈತಾಪಿ ಕೃಷಿ ರಕ್ಷಿಸಿ ಎಂಬ ಘೋಷಣೆಯಡಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿ ತಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು  ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನಾ ಧರಣಿ ನಡೆಸಿ ಸರ್ಕಾರದ ಗಮನ ಸೆಳೆಯಲಾಯಿತು.

ತಾಲ್ಲೂಕಿನ ಹೊನ್ನೂರು ಹಾಗೂ ಹುಚ್ಚವ್ವನಹಳ್ಳಿ ಗ್ರಾಮಗಳಲ್ಲಿ ಸಮಿತಿ ಮುಖಂಡರು, ಕಾರ್ಯಕರ್ತರು ಸಾಂಕೇತಿಕ ವಾಗಿ ಪ್ರತಿಭಟನೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.  

ಅಗತ್ಯ ವಸ್ತುಗಳ ಸುಗ್ರೀವಾಜೆ- 2020 ಕೂಡಲೇ ರದ್ದುಪಡಿಸಬೇಕು. ಕನಿಷ್ಟ ಬೆಂಬಲ ಬೆಲೆ ಖಾತರಿ ನೀಡದೇ ಇರುವ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ರೈತರ (ಅಶಕ್ತೀಕರಣ ಹಾಗೂ ರಕ್ಷಣೆ) ಒಪ್ಪಂದದ ಸುಗ್ರೀವಾಜೆ -2020 ಕೂಡಲೇ ಹಿಂಪಡೆದು ಡಾ. ಸ್ವಾಮಿನಾಥನ್ ವರದಿ ಶಿಫಾರಸ್ಸಿನಂತೆ ರೈತರ ಉತ್ಪಾದನಾ ಖರ್ಚಿನ ಮೇಲೆ ಶೇ. 50ರಷ್ಟು ಬೆಂಬಲ ಬೆಲೆ ಜಾರಿಗೊಳಿಸಬೇಕು. ಮುಕ್ತ ಸಾಗಾಣಿಕೆ, ಇ-ಮಾರುಕಟ್ಟೆ, ರೈತರು ಮತ್ತು ಕಂಪನಿಗಳ  ನಡುವಿನ ವ್ಯಾಜ್ಯಗಳನ್ನು ಕಂಪನಿ ಪರವಾಗಿ ಇತ್ಯರ್ಥಕ್ಕೆ ಪೂರಕವಾಗಿರುವ ರೈತರ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಸುಗ್ರೀವಾಜೆ-2020 ಅನ್ನು ಕೈಬಿ ಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇ ರಿಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಎಪಿಎಂಸಿ ಕಾಯ್ದೆಗೆ ತಿದ್ದು ಪಡಿ ತಂದು ಬಹುರಾಷ್ಟ್ರೀಯ ಕಂಪೆನಿಗ ಳಿಗೆ ಅನುಕೂಲ ಮಾಡಲು ಸರ್ಕಾರಗಳು ಒಳ ಒಪ್ಪಂದ ಮಾಡಿಕೊಂಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಲಿ ಇರುವ ಕಾಯ್ದೆಯನ್ನೇ ಉಳಿಸಿ, ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಮ್ಯುನಿಸ್ಟ್ ಮುಖಂಡ ಆವರಗೆರೆ ಉಮೇಶ್, ಮುಖಂಡರಾದ ಇ. ಶ್ರೀನಿವಾಸ್ ಮತ್ತು ಪ್ರಕಾಶ್, ರೈತ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿದರು.

ಪ್ರತಿಭಟನೆಯಲ್ಲಿ ತಿಪ್ಪೇಸ್ವಾಮಿ ಅಣ ಬೇರು, ಆವರಗೆರೆ ರಘುನಾಥ್, ಶ್ರೀನಿ ವಾಸ್, ಐರಣಿ ಚಂದ್ರು, ಸತೀಶ್ ಅರವಿಂದ್, ಮುಖಂಡರಾದ ಮೌಲಾನಾಯ್ಕ, ಭಗತ್ ಸಿಂಗ್,  ಹುಚ್ಚವ್ವನಹಳ್ಳಿ ಕಂಬರಾಜ್, ಮೂರ್ತಿ, ಕಲ್ಲೇಶ್,  ಹನುಮಂತಪ್ಪ, ಉಚ್ಚಂಗಪ್ಪ, ಸತೀಶ್ ಹಾಮಾ ನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!