ಗಾಂಧೀಜಿ-ಶಾಸ್ತ್ರೀಜಿಯವರ ಆದರ್ಶ ಅಳವಡಿಸಿಕೊಳ್ಳಬೇಕು

ಹರಿಹರ, ಸೆ. 2- ಮಹಾತ್ಮಾ ಗಾಂಧಿಯವರು ಶಾಂತಿ-ಅಹಿಂಸೆಯ ಹರಿಕಾರರು, ಸತ್ಯದ ಸರದಾರರು. ಅವರ ಆದರ್ಶ ಹಾಗೂ ಹೋರಾಟದ ಗುಣಗಳನ್ನು ಇಂದಿನ ಯುವಕರು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಇಂದು ನಡೆದ ಮಹಾತ್ಮಾ ಗಾಂಧಿಯವರ 152ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರದಲ್ಲಿ ಮಾತನಾಡಿದರು. 

ಗಾಂಧೀಜಿಯವರ ಚಿಂತನೆಗಳು ಕತ್ತಲೆಯಲ್ಲಿ ನಡೆಯುವವನಿಗೆ ಬೆಳಕು ನೀಡುತ್ತವೆ. ಅವರು ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿ ಮೂಲಕ ಪ್ರಪಂಚದಾದ್ಯಂತ ಹೆಸರು ಗಳಿಸಿದ್ದರು. ಅಹಿಂಸೆಯ ಹಾದಿಯಲ್ಲಿ ಕ್ರಮಿಸಿ, ಸದಾಕಾಲವೂ ಭಾರತೀಯರ ಮನದಲ್ಲಿ ಹಚ್ಚ ಹಸಿರಾಗಿದ್ದು, ಅವರ ತತ್ವ, ಸಿದ್ಧಾಂತ, ಬೋಧನೆಗ ಳನ್ನು ಭಾರತ ದೇಶವು ಅನುಸರಿಸುತ್ತಿದೆ. ಇಂತಹ ಮಹಾನ್ ವ್ಯಕ್ತಿಯ ಗುಣಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು, ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಬೇಕು ಎಂದು ಕರೆ ನೀಡಿದರು.

ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಮಾತನಾಡಿ, ಅಪ್ರತಿಮ ನಾಯಕ ಗಾಂಧೀಜಿಯವರ ಬದುಕು ಇಂದಿನ ಯುವಕರಿಗೆ ಆದರ್ಶ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಆಹಾರ ಇಲಾಖೆಯ ರಮೇಶ್‌, ಸರ್ವೆ ಇಲಾಖೆ ಕಸ್ತೂರಿ, ಆನಂದ್, ದೇವರಾಜ್, ಚೆನ್ನವೀರ ಸ್ವಾಮಿ, ವಿಜಯ ಮಹಾಂತೇಶ್,  ಹನುಮಂತಪ್ಪ, ಭಾಗೀರಥಿ, ನೀಲಮ್ಮ ಹಾಗೂ ಇತರರು ಹಾಜರಿದ್ದರು.

error: Content is protected !!