ರಾಣೇಬೆನ್ನೂರು, ಅ.1- ಹುಟ್ಟಿದಾಗಿನಿಂದ ರಾಜ ಧಾನಿಯ ಸುತ್ತಲೂ ಗಿರಿಕಿ ಹೊಡೆಯುತ್ತಿದ್ದ, ಅದರಲ್ಲೂ ಕಳೆದ 14 ವರ್ಷಗಳಿಂದ ಒಬ್ಬರೇ ವ್ಯಕ್ತಿಯ ಸುಪರ್ದಿ ಯಲ್ಲಿಯೇ ಇದ್ದ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿ ಯೇಷನ್ ಆಡಳಿತ ಚುನಾವಣೆ ಮೂಲಕ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ದೊರಕಿದ್ದು ರಾಣೇಬೆನ್ನೂರಿನ ಡಾ. ಮನೋಜ ಸಾಹುಕಾರ ಅಧ್ಯಕ್ಷರಾಗಿದ್ದಾರೆ.
ಇಲ್ಲಿನ ಓಂ ಪಬ್ಲಿಕ್ ಶಾಲೆಯಲ್ಲಿ ನೂತನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಜೊತೆಗೂಡಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಡಾ. ಮನೋಜ ಅವರು ವಿವರಿಸಿದರು.
ಜುಲೈ ತಿಂಗಳಲ್ಲಿಯೇ ಬೆಳಗಾವಿಯಲ್ಲಿ ಚುನಾವಣೆ ನಡೆದು ಮತದಾರರು ಅತ್ಯಂತ ಹೆಚ್ಚು ಮತಗಳನ್ನು ನೀಡಿ ಜಯದ ತೀರ್ಪು ನಮಗೆ ಕೊಟ್ಟಿದ್ದರೂ ಸಹ, ಸೋಲೊಪ್ಪಿ ಕೊಳ್ಳದ ಹಿಂದಿನ ಕಮಿಟಿಯವರು ಚುನಾವಣೆ ಸರಿಯಾಗಿ ನಡೆದೇ ಇಲ್ಲ ಎಂದು ಕುಂಟು ನೆಪ ಹೇಳಿದ್ದರಿಂದ ನ್ಯಾಯಾ ಲಯದ ಮೊರೆ ಹೋಗಿ ಆಡಳಿತ ಪಡೆದುಕೊಳ್ಳಬೇ ಕಾಯಿತು ಎಂದು ಮನೋಜ ಹೇಳಿದರು.
ನ್ಯಾಯಾಲಯದ ತೀರ್ಪು ಹಾಗೂ ಕರ್ನಾಟಕದಲ್ಲಿನ ಸಂಪೂರ್ಣ ಮಾಹಿತಿ ಪಡೆದುಕೊಂಡ ಹ್ಯಾಂಡ್ ಬಾಲ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯದರ್ಶಿ ಆನಂದೇಶ್ವರ ಪಾಂಡೆ ಅವರು ದಿನಾಂಕ 27 ರಂದು ನೀಡಿದ ಆದೇಶದಂತೆ ನಾನು ಅಧ್ಯಕ್ಷನಾಗಿ, ಬಿ.ಎಲ್. ಲೋಕೇಶ್ ಗೌರವ ಕಾರ್ಯ ದರ್ಶಿ ಮತ್ತು ಪ್ರಕಾಶ್ ನರಗಟ್ಟಿ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡಿದ್ದೇವೆ ಎಂದು ಮನೋಜ ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ಹಾಗೂ ನೌಕರಿಗಳಲ್ಲಿ ಮೀಸಲಾತಿ ಮುಂತಾದ ಸೌಲಭ್ಯಗಳಿಂದ ನಮ್ಮ ಯುವಕರು ವಂಚಿತರಾಗುತ್ತಿದ್ದು, ಯುವ ಶಕ್ತಿಗೆ ಕ್ರೀಡೆಗಳ ಮಹತ್ವದ ಅರಿವಿದ್ದರೂ ಸಹ ಸಂಸ್ಥೆಗಳ ಪ್ರೋತ್ಸಾಹದ ಕೊರತೆಯಿಂದ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸುವಲ್ಲಿ ನಾವು ಮೊದಲ ಆದ್ಯತೆ ನೀಡಲಿದ್ದೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿದ್ದ ಕೆ.ಜಿ. ಮಾದಪ್ಪ, ವಿನೋದ ಎಸ್, ಬಿ.ಎಲ್. ಲೋಕೇಶ್, ಪ್ರಕಾಶ ನರಗಟ್ಟಿ, ಕೆ. ರಾಘವೇಂದ್ರ ಮತ್ತು ಸುರೇಶ ರಾಘವನ್ ಹೇಳಿದರು.