ದಾವಣಗೆರೆ, ಅ.1- ಚೀನಾದ ಮೇಲೆ ಈಗ ಯುದ್ಧ ಸಾರಲು ಸೂಕ್ತವಾಗಿದೆ. ತಡವಾದರೆ ಲಡಾಖ್-ಗಲ್ಪಾನ್ ಪ್ರದೇಶಗಳಲ್ಲಿ ಭಾರೀ ಹಿಮ ಬೀಳಲಿದೆ ಎಂದು ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಹೇಳಿದ್ದಾರೆ. ಭಾನುವಾರ ರಾತ್ರಿ 200 ಜನ ಚೀನಾ ಸೈನಿಕರು ಎಲ್.ಎ.ಸಿ ಲೈನ್ ಕ್ರಾಸ್ ಮಾಡಿ ಸಿಯುವಿ ಏರಿಯಾವನ್ನು ಕ್ರಾಸ್ ಮಾಡಿ, ಭಾರ ತೀಯ ಸೈನಿಕರ ಮೇಲೆ ಆಕ್ರಮಣ ನಡೆಸಿರುವರು. ನಿನ್ನೆ ಚೀನಾ ಸೈನಿಕರು ಭಾರೀ ಸದ್ದು ಮಾಡುವ ಲೌಡ್ ಸ್ಪೀಕರ್ ಹಾಕಿ ನಮ್ಮ ಸೈನಿಕರಿಗೆ ತೀವ್ರ ಹಿಂಸೆ ಮಾಡಿರು ವುದು ಖಂಡನೀಯ. ಈಗ ಚೀನಾದ ಮೇಲೆ ಯುದ್ಧ ಸಾರಲೇ ಬೇಕಾಗಿದೆ ಎಂದು ಪ್ರಧಾನಿ, ರಕ್ಷಣಾ ಸಚಿ ವರು, ವಿದೇಶಾಂಗ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಅಮೆರಿಕಾ, ಫ್ರಾನ್ಸ್, ಬ್ರಿಟನ್, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಇಸ್ರೇಲ್, ಸ್ವಿಟ್ಜರ್‌ಲ್ಯಾಂಡ್, ನ್ಯೂಜಿಲ್ಯಾಂಡ್, ಫಿಲಿಪೈನ್ ರಾಷ್ಟ್ರಗಳು ಯುದ್ಧ ಸಾಮಗ್ರಿ ಜೊತೆಗೆ ನೆರವನ್ನು ಭಾರತಕ್ಕೆ ನೀಡುತ್ತಿವೆ. ಆದ್ದರಿಂದ ತಡಮಾಡದೆ ಯುದ್ಧಕ್ಕೆ ಸಿದ್ಧರಾಗುವುದು ಸೂಕ್ತ ಎಂದಿದ್ದಾರೆ.