ದಾವಣಗೆರೆ, ಜು. 27- ಜಿಲ್ಲೆಯಲ್ಲಿ ಇಂದು 6 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಮೂವರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ದಾವಣಗೆರೆ ಕೆಟಿಜೆ ನಗರದ 21 ವರ್ಷದ ಯುವತಿ, ಜುಬ್ಲಿಬಾವಿ ರಸ್ತೆಯ 34 ವರ್ಷದ ಪುರುಷ, ಚನ್ನಗಿರಿಯ ಕುಂಬಾರ ಬೀದಿಯ 60 ವರ್ಷದ ಮಹಿಳೆ ಮತ್ತು ಹರಿಹರದ 39 ಹಾಗೂ 34 ವರ್ಷದ ಮಹಿಳೆಯರು ಮತ್ತು 45 ವರ್ಷದ ಪುರುಷ ಸೇರಿ ಒಟ್ಟು ಆರು ಜನರಲ್ಲಿ ಸೋಂಕು ದೃಢಪಟ್ಟಿದೆ. ಚನ್ನಗಿರಿ ಕುಂಬಾರ ಬೀದಿಯ ರೋಗಿ ಸಂಖ್ಯೆ 8801, 58 ವರ್ಷದ ಮಹಿಳೆ ಹಾಗೂ 14 ವರ್ಷದ ಬಾಲಕ ರೋಗಿ ಸಂಖ್ಯೆ 8802 ಮತ್ತು ದಾವಣಗೆರೆ ತರಳಬಾಳು ಬಡಾವಣೆಯ ರೋಗಿ ಸಂಖ್ಯೆ 7576, 50 ವರ್ಷದ ಪುರುಷ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.