ದಾವಣಗೆರೆ, ಜೂ.27- ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾ ಧ್ಯಕ್ಷರ ಪದಗ್ರಹಣ ಸಮಾರಂಭದ ಮುಖೇನ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ ಮತ್ತು ಚೈತನ್ಯ ಬರಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಬರುವ ಜುಲೈ 2ರಂದು ಬೆಳಗ್ಗೆ 11 ಕ್ಕೆ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರುಗಳಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಅವರುಗಳ ಪದಗ್ರಹಣ ಜರುಗಲಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ವೀಕ್ಷಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯಾದ್ಯಂತ 7831 ಕ್ಕೂ ಅಧಿಕ ಸ್ಥಳಗಳಲ್ಲಿ ಜೂಮ್ ಮುಖಾಂತರ ನೇರ ವೀಕ್ಷಣೆ ಹಾಗೂ ಸಂವಿಧಾನ ಪೀಠಿಕೆ ಓದುವುದು ಪ್ರತಿಜ್ಞೆ ಕೈಗೊಳ್ಳುವುದನ್ನು ಹಮ್ಮಿಕೊಂಡಿದ್ದು, ರಾಜ್ಯದ 30 ಜಿ.ಪಂ., 176 ತಾ.ಪಂ., 6021 ಗ್ರಾ.ಪಂ. ಹಾಗೂ 8 ಕಾರ್ಪೊರೇಷನ್, 243 ನಗರ ಸಭೆ, ಪುರಸಭೆ, ಪ.ಪಂ. ವ್ಯಾಪ್ತಿಗಳಲ್ಲಿ ಪದಗ್ರಹಣ ಸಮಾರಂಭ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಹತ್ತು ಲಕ್ಷಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಜೂಮ್ ಮೂಲಕ ನೇರ ಭಾಗಿಯಾಗುವರು. -ಡಿ. ಬಸವರಾಜ್
ಕಾರ್ಯಕ್ರಮದಲ್ಲಿ ಭಾಗವಹಿಸಿದವರು 7676366666 ಈ ನಂಬರ್ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾಗಿ ವಿನಂತಿಸಿದರು.
ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, ಬಾಬಾ ರಾಂ ದೇವ್ ಅವರು ದೇಶದ ಪೆಟ್ರೋಲ್ ಬಂಕ್ಗಳನ್ನು ತಮಗೆ ವಹಿಸಿದರೆ 45 ರೂ.ಗೆ ಒಂದು ಲೀಟರ್ ಪೆಟ್ರೋಲ್ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಪ್ರಧಾನಿ ಮೋದಿಯವರು ಪೆಟ್ರೋಲ್ ಬಂಕ್ಗಳ ಜವಾಬ್ದಾರಿ ಏಕೆ ನೀಡಬಾರದು ? ಅಲ್ಲದೇ, ಕೊರೊನಾ ಸೋಂಕಿಗೆ ಲಕ್ಷಾಂತರ ರೂ. ವೆಚ್ಚದ ಬದಲಿಗೆ ಬಾಬಾ ರಾಂ ದೇವ್ 500 ರೂ.ಗೆ ಔಷಧಿ ಕಂಡು ಹಿಡಿದಿದ್ದು, ಅದನ್ನೇಕೆ ಖರೀದಿಸಬಾರದು ಎಂದು ಕೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆಪಿಸಿಸಿ ವೀಕ್ಷಕ ಅಲ್ಲಾವಲಿ ಗಾಜಿಖಾನ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ, ಮುಖಂಡರುಗಳಾದ
ಕೆ.ಎಂ. ಮಂಜುನಾಥ್, ಬಿ.ಹೆಚ್. ಉದಯ್ಕು ಮಾರ್, ಎಂ.ಕೆ. ಲಿಯಾಖತ್ ಅಲಿ,
ಡಿ. ಶಿವಕುಮಾರ್, ಕೆ.ಸಿ. ಜುಬೇರ್ ಇದ್ದರು.