ಮಲೇಬೆನ್ನೂರು, ಜೂ.27- ಅನಾರೋಗ್ಯದಿಂದ ಬಳಲುತ್ತಿರುವ ಹರಿಹರ ತಾಲ್ಲೂಕಿನ 50ಕ್ಕೂ ಹೆಚ್ಚು ಬಡ ಜನರಿಗೆ 2.19 ಲಕ್ಷ ರೂ.ಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ನೀಡಿದ್ದಾರೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಗಳಿ ವಲಯದ ಮೇಲ್ವಿಚಾರಕರಾದ ಶಿಲ್ಪಾ ತಿಳಿಸಿದರು.
ಜಿಗಳಿ ಗ್ರಾಮದಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹೆಚ್. ಶಿವಾನಂದಪ್ಪ ಅವರಿಗೆ 5 ಸಾವಿರ ರೂ.ಗಳನ್ನು ವಿತರಿಸಿದ ನಂತರ ಶಿಲ್ಪಾ ಮಾತನಾಡಿದರು.
ಅನಾರೋಗ್ಯ ದಿಂದಾಗಿ ತೊಂದರೆ ಅನುಭವಿಸುತ್ತಿರುವ ಬಡವರಿಗೆ ಡಾ. ವೀರೇಂದ್ರ ಹೆಗ್ಗಡೆ ಅವರು ಈ ನೆರವು ನೀಡಿದ್ದಾರೆ ಎಂದರು. ಗ್ರಾಮದ ಜಿ. ಆನಂದಪ್ಪ ಅವರು 1 ಸಾವಿರ ರೂ. ಮತ್ತು ಬಾರಿಕೇರ ಹನುಮಂತಪ್ಪ ಅವರು 500 ರೂ.ಗಳನ್ನು ಶಿವಾನಂದಪ್ಪನವರಿಗೆ ನೀಡಿ, ಚಿಕಿತ್ಸೆಗೆ ನೆರವಾದರು. ಸೇವಾ ಪ್ರತಿನಿಧಿ ಶೋಭಾ, ವಿಜಯಭಾಸ್ಕರ್, ಗ್ರಾಮದ ಬಿ. ಸೋಮಶೇಖರಚಾರಿ, ಕಲಾವಿದ ಡಿ. ರಂಗನಾಥ್, ಎಂ. ಕರಿಯಪ್ಪ, ಭೋವಿ ಮಂಜಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.