ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ವತಿಯಿಂದ ಇಂದು ಮಧ್ಯಾಹ್ನ 1 ಗಂಟೆಗೆ ಸಂಘದ ಕಚೇರಿಯಲ್ಲಿ `ಸಿಜಿಕೆ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕರ್ನಾಟಕ ರಂಗ ಪರಿಷತ್ ಹಾಗೂ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಆಶ್ರಯದಲ್ಲಿ ಕೊಡಮಾಡುವ ಪ್ರಶಸ್ತಿ ಈ ಬಾರಿ ಹರಿಹರ ತಾಲ್ಲೂಕು ಕುಂಬಳೂರಿನ ಕೆ.ಎನ್. ಹನುಮಂತಪ್ಪ ಅವರಿಗೆ ಲಭಿಸಿದ್ದು, ಅವರನ್ನು ಇಂದು ಸನ್ಮಾನಿಸಲಾಗುವುದು.
ಎಂ. ಶಿವಕುಮಾರ್, ಎ.ಆರ್. ಉಜ್ಜಿನಪ್ಪ, ಐರಣಿ ಬಸವರಾಜ್, ಎನ್.ಎಸ್. ರಾಜು ಮತ್ತಿತರರು ಉಪಸ್ಥಿತರಿರುವರು.