ದಾವಣಗೆರೆ, ಜೂ.24- ಕವಿ, ವಿಮರ್ಶಕ, ಕಥೆಗಾರ ಡಾ. ಲೋಕೇಶ್ ಅಗಸನಕಟ್ಟೆ ಅವರ ಕೃತಿ `ಮೀಸೆ ಹೆಂಗಸು ಮತ್ತು ಇತರೆ ಕಥೆಗಳು’ ಕಥಾ ಸಂಕಲನಕ್ಕೆ ಹೆಸರಾಂತ ಕಥೆಗಾರ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪುರಸ್ಕಾರ ಲಭಿಸಿದೆ. ಪುರಸ್ಕಾರ 25 ಸಾವಿರ ರೂ. ನಗದು ಮತ್ತು ಪ್ರಶಸ್ತಿಯನ್ನು ಒಳಗೊಂಡಿದೆ. ಈ ಕೃತಿಯನ್ನು ಪ್ರಕಟಿಸಿ ರುವ ವಸಂತ ಪ್ರಕಾಶನಕ್ಕೂ 10 ಸಾವಿರ ರೂ. ಬಹುಮಾನ ದೊರಕಲಿದೆ. ಶ್ರೀಧರ ಬಳಿಗಾರ ಅವರ `ಮೃಗಶಿರ’ ಕಾದಂಬರಿಗೆ ಕೂಡ ಮಾಸ್ತಿ ಪುರಸ್ಕಾರ ದೊರೆತಿದೆ. ಡಾ. ಲೋಕೇಶ್ ಅಗಸನಕಟ್ಟೆ ಅವರ ಹಲವು ಕೃತಿಗಳಿಗೆ ವಿವಿಧ ಸಾಹಿತ್ಯಿಕ ಪ್ರಶಸ್ತಿಗಳು ಲಭ್ಯವಾಗಿವೆ. ಅವರು ಹೊರತಂದಿ ರುವ `ಅತೀತ ಲೋಕದ ಮಹಾಯಾಂತ್ರಿಕ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಚದುರಂಗ ದತ್ತಿ ಬಹುಮಾನ ಬಂದಿದೆ. ಅಗಸನಕಟ್ಟೆ ರಚಿಸಿರುವ `ನಮ್ಮೆಲ್ಲರ ಬುದ್ಧ’ ನಾಟಕ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ರಾಜ್ಯಾದ್ಯಂತ ಪ್ರದರ್ಶನಗೊಂಡಿದೆ.
November 23, 2024