ಹರಪನಹಳ್ಳಿ ತಾ|| ಬಿಜೆಪಿಗೆ ಪದಾಧಿಕಾರಿಗಳ ಆಯ್ಕೆ

ಹರಪನಹಳ್ಳಿ, ಜೂ.23- ತಾಲ್ಲೂಕು ಬಿಜೆಪಿ ಮಂಡಲಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಪ್ರಧಾನ ಕಾರ್ಯದರ್ಶಿಗಳಾಗಿ ಬಾವಿಹಳ್ಳಿ ಉದಯಕುಮಾರ್, ರಂಗಾಪುರದ ಕೆ.ಬಸವರಾಜ್, ಉಪಾಧ್ಯಕ್ಷರುಗಳಾಗಿ ನಿಟ್ಟೂರು ಸಣ್ಣಹಾಲಪ್ಪ, ನಿಟ್ಟೂರು ಕೊಟ್ರೇಶ್, ಯಡಿಹಳ್ಳಿ ಶೇಖರಪ್ಪ, ಪ್ರಭು ಲೋಲೇಶ್ವರ, ಭಾನ್ಯನಾಯ್ಕ್, ಸುವರ್ಣಮ್ಮ ಅವರನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯದರ್ಶಿಗ ಳಾಗಿ ರವಿ ಅಧಿಕಾರ್, ಪೂರ್ಯಾನಾಯ್ಕ್, ಚಂದ್ರಪ್ಪ, ಮರಿಯಪ್ಪ, ಕೌಟಿ ಸುಮ, ಅಂಜಿನಪ್ಪ, ಖಜಾಂಚಿಯಾಗಿ ಯು.ಪಿ.ನಾಗರಾಜ್, ಕಾರ್ಯಾ ಲಯದ ಕಾರ್ಯದರ್ಶಿಯಾಗಿ ಕೆ.ರಾಘವೇಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. 

ರೈತ ಮೋರ್ಚಾ ಅಧ್ಯಕ್ಷರಾಗಿ ಗೋಣಿಬಸಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮತ್ತಿಹಳ್ಳಿ ಕೊಟ್ರೇಶ್, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಎಂ.ಮಲ್ಲೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ್, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ನೀಲಗುಂದದ ಮನೋಜ್‌ ತಳವಾರ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್‌ ಕಡತಿ, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಎಂ.ದ್ಯಾಮಪ್ಪ ಹಲುವಾಗಲು, ಪ್ರಧಾನ ಕಾರ್ಯದರ್ಶಿ ಒಡ್ಡಿನದಾದಾಪುರದ ಶಿವಾನಂದ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಟಿ.ಪದ್ಮಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಲತಾ ನಾಗರಾಜ್, ನಗರ ಘಟಕದ ಅಧ್ಯಕ್ಷರಾಗಿ ಶಾನಭೋಗರ ಕಿರಣ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ.ನಿರಂಜನ್ ಆಯ್ಕೆಯಾಗಿದ್ದಾರೆ.

ಈ ವೇಳೆ ತಾಲ್ಲೂಕು ಅಧ್ಯಕ್ಷ ಸತ್ತೂರ್ ಹಾಲೇಶ್‌ ಮಾತನಾಡಿ, ಕ್ಷೇತ್ರದ ಶಾಸಕ ಜಿ.ಕರುಣಾಕರ ರೆಡ್ಡಿ ಅವರ ಸೂಚನೆ ಮತ್ತು ತಾಲ್ಲೂಕಿನ ಪಕ್ಷದ ಹಿರಿಯ ಹಾಗೂ ಕಿರಿಯ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತರ ಸಲಹೆ ಮೇರೆಗೆ ಮಂಡಲದ ನೂತನ ಬಿಜೆಪಿ  ಪದಾಧಿಕಾರಿಗಳನ್ನು ಸರ್ವಾನುಮತದಿಂದ ನಿಯುಕ್ತಿಗೊಳಿಸಲಾಗಿದೆ ಎಂದು ತಿಳಿಸಿದರು.

ಮಂಡಲದ ನೂತನ ಪದಾಧಿಕಾರಿಗಳಿಗೆ ಶಾಸಕ ಜಿ.ಕರುಣಾಕರ ರೆಡ್ಡಿ ಶುಭ ಕೋರಿದ ಬಳಿಕ ಮಾತನಾಡಿ, ಪಕ್ಷ ನಿಮ್ಮನ್ನು ಗುರುತಿಸಿ ನಿಮಗೆ ಒಂದು ಸ್ಥಾನಮಾನ ನೀಡಿದೆ. ಆ ಸ್ಥಾನಕ್ಕೆ ಧಕ್ಕೆ ಬರದ ಹಾಗೆ ಪಕ್ಷಕ್ಕೆ ನಿಷ್ಠರಾಗಿ ನಡೆದುಕೊಳ್ಳಿ. ಮುಂಬರುವ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಪಕ್ಷ ಬಲವರ್ಧನೆಗೆ ಶ್ರಮಿಸಿ ಎಂದು ತಿಳಿಸಿದರು.

ತಾ.ಪಂ. ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಮುಖಂಡರಾದ ಎಂ.ಪಿ.ನಾಯ್ಕ, ಬೆಣ್ಣಿಹಳ್ಳಿ ಆರ್. ಕರೇಗೌಡ, ಯಡಿಹಳ್ಳಿ ಶೇಖರಪ್ಪ, ಬಾಗಳಿ ಕೊಟ್ರೇಶಪ್ಪ, ಕಲ್ಲೇರ ಬಸವರಾಜ್, ಆರ್.ಲೋಕೇಶ್, ಎಸ್.ಪಿ.ಲಿಂಬ್ಯಾನಾಯ್ಕ, ಎಂ.ಸಂತೋಷ್, ಕೆ.ಕೃಷ್ಣ, ಈಡಿಗರ ಅಂಜಿನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!