ಮಲೇಬೆನ್ನೂರು, ಜೂ.3- ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಇಲ್ಲಿನ ಪುರಸಭೆ ಹಾಗೂ ಸಮುದಾಯ ಆರೋಗ್ಯದ ವತಿಯಿಂದ ಪಟ್ಟಣದಲ್ಲಿರುವ 50 ವರ್ಷ ಮೇಲ್ಪಟ್ಟವರ ಗಂಟಲು ದ್ರವ ಪರೀಕ್ಷೆಗೆ ಮಂಗಳವಾರ ಚಾಲನೆ ನೀಡಲಾಯಿತು. 12ನೇ ವಾರ್ಡ್ನಲ್ಲಿರುವ 50 ವರ್ಷ ಮೇಲ್ಪಟ್ಟ 15 ಜನರ ಗಂಟಲು ದ್ರವ ಸ್ಯಾಂಪಲ್ ಇಂದು ಪಡೆಯಲಾಯಿತು.
ಪಟ್ಟಣದ ಜಿಬಿಎಂಎಸ್ ಶಾಲೆಯಲ್ಲಿ ಗಂಟಲು ದ್ರವ ಸ್ಯಾಂಪಲ್ ಪಡೆಯುವ ವ್ಯವಸ್ಥೆ ಮಾಡಿದ್ದು, ನಾಳೆ ಬುಧವಾರ 13ನೇ ವಾರ್ಡ್ನಲ್ಲಿರುವ 50 ವರ್ಷ ಮೇಲ್ಪಟ್ಟವರನ್ನು ಪರೀಕ್ಷೆಗೆ ಒಳಪಡಿಸಲಾಗುವುದೆಂದು ಪುರಸಭೆ ಆರೋಗ್ಯಾಧಿಕಾರಿ ಗುರುಪ್ರಸಾದ್ ತಿಳಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಪುರಸಭೆ ಅಧಿಕಾರಿಗಳಾದ ಉಮೇಶ್, ನವೀನ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಯಾಂಪಲ್ ಸಂಗ್ರಹಣೆ ವೇಳೆ ಹಾಜರಿದ್ದರು.