ಚನ್ನಗಿರಿಯ ಗೌಡ್ರು ಬೀದಿ ಕಂಟೈನ್‌ಮೆಂಟ್ ವಲಯ

ಚನ್ನಗಿರಿ, ಜೂ.22- ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ಸಂಖ್ಯೆ 8806 ರ ಪ್ರದೇಶವನ್ನು `ಕಂಟೈನ್‌ಮೆಂಟ್ ವಲಯ’ವೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ   ತಿಳಿಸಿದ್ದಾರೆ.

ಈ ಪ್ರದೇಶದ ವ್ಯಾಪ್ತಿಯಲ್ಲಿ 62 ಮನೆಗಳು, 211 ಜನಸಂಖ್ಯೆ ಹಾಗೂ 200 ಮೀಟರ್ ಬಫರ್ ಝೋನ್ ಸೇರಿದಂತೆ  ಈ ವಲಯವನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

error: Content is protected !!