ಅತಿಥಿ ಉಪನ್ಯಾಸಕರ ವೇತನ ಬಿಕ್ಕಟ್ಟು ಪರಿಹಾರಕ್ಕೆ ಎಐಡಿಎಸ್ಓ ಆಗ್ರಹ

ದಾವಣಗೆರೆ, ಜೂ.20- ಅತಿಥಿ ಉಪನ್ಯಾಸಕರ, ಶಿಕ್ಷಕರ ವೇತನ ಬಿಕ್ಕಟ್ಟು ಪರಿಹರಿಸಬೇಕು ಮತ್ತು ವಿಶೇಷ ಪರಿಹಾರ ಪ್ಯಾಕೇಜ್‍ಗಾಗಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‍ನೈಸೇಷನ್ (ಎಐಡಿಎಸ್ಓ) ಆಗ್ರಹಿಸಿದೆ.

ಅತಿಥಿ ಉಪನ್ಯಾಸಕರ ಮತ್ತು ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರವು ಸಂಪೂರ್ಣವಾಗಿ ನಿರ್ಲಕ್ಷಿ ಸಿದೆ. ನಮ್ಮ ರಾಜ್ಯದಲ್ಲಿರುವ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾ ಸಕರು ದುಡಿಯುತ್ತಿದ್ದಾರೆ. ಈಗಂತೂ ತಮ್ಮ ಕೈಯ್ಯಿಂ ದಲೇ ಖರ್ಚನ್ನು ಭರಿಸುತ್ತಾ ಆನ್‍ಲೈನ್ ತರಗತಿಗ ಳನ್ನೂ ಸಹ ಅವರು ನಿಭಾಯಿಸುತ್ತಿದ್ದಾರೆ. ಕೆಲವರಂತೂ 20-25 ವರ್ಷಗಳಿಂದ ನಿರಂತರವಾಗಿ ‘ಅತಿಥಿ’ಗಳಾ ಗಿಯೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅತಿಥಿ ಉಪನ್ಯಾ ಸಕರು, ಶಿಕ್ಷಕರ ಪರವಾಗಿ ಸಂಘಟನೆ ತಿಳಿಸಿದೆ.

2019 ಜನವರಿಯಲ್ಲಿ ಯುಜಿಸಿ ಸುತ್ತೋಲೆಯೊಂದನ್ನು ಹೊರಡಿಸಿ ಅತಿಥಿ ಉಪನ್ಯಾಸಕರಿಗೆ ದಿನಕ್ಕೆ ರೂ 1,500 ಅಥವಾ ಮಾಸಿಕ 50 ಸಾವಿರ ವೇತನವನ್ನು ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಆದರೆ, ಇಂದಿಗೂ ನಮ್ಮ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಮಾಸಿಕ 18 ಸಾವಿರ ಮತ್ತು ಅತಿಥಿ ಶಿಕ್ಷಕರಿಗೆ ಮಾಸಿಕ 7,500 ದೊರಕುತ್ತಿದೆ. ಸರ್ಕಾರ ಕೊಡುವ ಕಡಿಮೆ ‘ಗೌರವ ಧನ’ಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಅವರೆಲ್ಲರ ಬದುಕು ಅತ್ಯಂತ ಅತಂತ್ರವಾಗಿದೆ.  ಕಳೆದ 4-5 ತಿಂಗಳಿನಿಂದ ಅವರಿಗೆ ವೇತನ ಬಂದಿಲ್ಲ. ಕೆಲವರಿಗಂತೂ ಕಳೆದ 10 ತಿಂಗಳಿನಿಂದ ವೇತನ ದೊರಕಿಲ್ಲ ಎಂದು  ಅಳಲಿಟ್ಟಿದೆ. 

error: Content is protected !!