ನಾಳೆ ಆನ್‌ಲೈನ್‌ ಯೋಗ

ದಾವಣಗೆರೆ, ಜೂ. 19- ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ 6ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಾಡಿದ್ದು ದಿನಾಂಕ 21ರ ಭಾನುವಾರ ವಿಭಿನ್ನವಾಗಿ ಆಯೋಜಿಸಿದೆ ಎಂದು  ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್  ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಭಾನುವಾರ ಬೆಳಿಗ್ಗೆ 6.15ಕ್ಕೆ ಯೋಗ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪಾಲಿಕೆ ಮೇಯರ್, ಜಿ.ಪಂ. ಸಿಇಒ ಹಾಗೂ ಇತರರು  ಭಾಗವಹಿಸಲಿರುವುದಾಗಿ  ಹೇಳಿದರು.

ಯೋಗ ಕಾರ್ಯಕ್ರಮವನ್ನು ಫೇಸ್ ಬುಕ್, ಯೂ ಟೂಬ್ ಹಾಗೂ ವಿ-ಒನ್ ಸ್ಥಳೀಯ ಸುದ್ದಿ ಚಾನಲ್‌ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಿ ಯೋಗಾಸನ ಮಾಡುವುದರ ಮೂಲಕ ಕೊರೊನಾ ವಿರುದ್ಧ ಆರೋಗ್ಯ ವರ್ಧನೆ ಮಾಡಿಕೊಳ್ಳಬೇಕು ಎಂದು ರಾಯ್ಕರ್ ಕರೆ ನೀಡಿದರು.

ಯೋಗ ನೇರ ಪ್ರಸಾರವನ್ನು ಫೇಸ್ ಬುಕ್ DAVANGERE JILLA YOGAOKKUTALIVE, ಯೂಟೂಬ್ : ಯೋಗ ಸಮಾಚಾರ ದಾವಣಗೆರೆ ಲಿಂಕ್ ಮೂಲಕ ವೀಕ್ಷಿಸಬಹುದಾಗಿದೆ. ಮಾಹಿತಿಗಾಗಿ 9844040813, 9449629061, 9845685224, 9845451787ಗೆ ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಯೋಗ ಒಕ್ಕೂಟದ ಗೌರವ ಸಲಹೆಗಾರ ಡಾ.ಯು.ಸಿದ್ದೇಶಿ, ಗೌರವಾಧ್ಯಕ್ಷ ಎಂ.ಶಿವಪ್ಪ, ಜಯಣ್ಣ ಬಾದಾಮಿ, ರಾಜು ಬದ್ಧಿ, ಅನಿಲ್ ರಾಯ್ಕರ್, ಮಹಾಂತೇಶ್, ಪರಶುರಾಮ್, ತೀರ್ಥರಾಜು ಹಾಗೂ ಇತರರಿದ್ದರು.

error: Content is protected !!