ಪರೀಕ್ಷೆ ನಡೆಸಿದರೆ ಹೋರಾಟ : ವಾಟಾಳ್ ನಾಗರಾಜ್ ಎಚ್ಚರಿಕೆ

ದಾವಣಗೆರೆ, ಜೂ.18- ರಾಜ್ಯದಲ್ಲಿ ಕೊರೊನಾ ಬಂದಿರುವುದರಿಂದ  ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಗಳಿಗೆ ಪರೀಕ್ಷೆ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಬೇಕು ಎಂದು ಶಿಕ್ಷಣ ಸಚಿವರಿಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರಲ್ಲದೇ, ನೀವು ಪರೀಕ್ಷೆ ನಡೆಸಿದರೆ ತೀವ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ  ನೀಡಿದ್ದಾರೆ.

 ಇಂದಿಲ್ಲಿ ತಮ್ಮನ್ನು ಭೇಟಿಯಾದ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಚಿವರು, ಶಾಸಕರು ಜಿದ್ದಾ ಜಿದ್ದಿಗೆ ಬಿದ್ದು ಮಕ್ಕಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಗುಡುಗಿದರು. ಆನ್‍ಲೈನ್ ಶಿಕ್ಷಣ ನರಕ ಇದ್ದಂತೆ ಇದೆ. ಹಳ್ಳಿಗಳಲ್ಲಿ ವಿದ್ಯುತ್, ಇಂಟರ್ನೆಟ್ ಇದ್ಯಾವುದೂ ಇರಲ್ಲ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ನಡೆಸುವುದಾದರೆ ಅದು ಸರಿಯಲ್ಲ. ಪರೀಕ್ಷೆ ಮಾಡುವಾಗ ಸಾಮಾಜಿಕ ಅಂತರ ಇಲ್ಲ. ಯಾವುದೇ ವ್ಯವಸ್ಥೆ ಇಲ್ಲದೆ ಪರೀಕ್ಷೆ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಪರೀಕ್ಷೆ ಮಾಡಿದರೆ ತೀವ್ರ ಹೋರಾಟ ನಡೆಯುತ್ತದೆ. ಸರಿಯಾದ ಶಿಕ್ಷಣ ಇಲ್ಲದೇ ಪರೀಕ್ಷೆ ಸರಿಯಲ್ಲ. ತೆಲಂಗಾಣ, ಆಂಧ್ರ, ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿದೆ ಎಂದರು. 

ಚೀನಾ ಅಭಿಯಾನದ ಬಗ್ಗೆ ಅಷ್ಟು ಗೊತ್ತಿಲ್ಲ. ಚೀನಾ ವಸ್ತು ನಿರ್ಬಂಧ ಅಭಿಯಾನ ನನಗೆ ಗೊತ್ತಿಲ್ಲ. ನನಗೇನಿದ್ದರೂ ರಾಜ್ಯ, ಮಕ್ಕಳ ಹೋರಾಟ ಅಷ್ಟೇ. ರಾಜ್ಯದ ಬಗ್ಗೆ ಜೀವ ಕೊಡಲು ಸಿದ್ದ. ಎಸ್‍ಎಸ್‍ಎಲ್‍ಸಿ ಮಕ್ಕಳು 8 ಲಕ್ಷ ಇದ್ದಾರೆ. ಇದನ್ನು ಕಂಟ್ರೋಲ್ ಮಾಡೋಕೆ ಸರ್ಕಾರದಿಂದ ಸಾಧ್ಯವಿಲ್ಲ. ಇಂತಹ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವರು ಹುಡುಗಾಟ ಆಡಬಾರದು. ಎಚ್ಚರಿಕೆ ನೀಡುತ್ತಿದ್ದೇನೆಂದರು.

ನಾಳೆ ದೊಡ್ಡ ಹೋರಾಟ : ಫೀ ಒಂದು ದಂಧೆಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ದಂಧೆ ಕೋರರಾಗಿವೆ. ಮಕ್ಕಳು ಪೋಷಕರು ಕಣ್ಣೀರು ಇಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಾಡಿದ್ದು ದಿನಾಂಕ 20ರಂದು ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ರಾಜ್ಯದ ಉದ್ದಗಲಕ್ಕೂ ಸರ್ಕಾರದ ನೀತಿಯ ವಿರುದ್ಧ ಚಳವಳಿ ಹಮ್ಮಿಕೊಂಡಿದ್ದೇನೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ಎಂದು ಕುಟುಕಿದರು.

ಪರೀಕ್ಷೆ ಮಾಡಿದರೆ ತೀವ್ರ ಹೋರಾಟ ನಡೆಯುತ್ತದೆ. ಸರಿಯಾದ ಶಿಕ್ಷಣ ಇಲ್ಲದೇ ಪರೀಕ್ಷೆ ಸರಿಯಲ್ಲ. ತೆಲಂಗಾಣ, ಆಂಧ್ರ, ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿದೆ ಎಂದರು. 

ಚೀನಾ ಅಭಿಯಾನದ ಬಗ್ಗೆ ಅಷ್ಟು ಗೊತ್ತಿಲ್ಲ. ಚೀನಾ ವಸ್ತು ನಿರ್ಬಂಧ ಅಭಿಯಾನ ನನಗೆ ಗೊತ್ತಿಲ್ಲ. ನನಗೇನಿದ್ದರೂ ರಾಜ್ಯ, ಮಕ್ಕಳ ಹೋರಾಟ ಅಷ್ಟೇ. ರಾಜ್ಯದ ಬಗ್ಗೆ ಜೀವ ಕೊಡಲು ಸಿದ್ದ. ಎಸ್‍ಎಸ್‍ಎಲ್‍ಸಿ ಮಕ್ಕಳು 8 ಲಕ್ಷ ಇದ್ದಾರೆ. ಇದನ್ನು ಕಂಟ್ರೋಲ್ ಮಾಡೋಕೆ ಸರ್ಕಾರದಿಂದ ಸಾಧ್ಯವಿಲ್ಲ. ಇಂತಹ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವರು ಹುಡುಗಾಟ ಆಡಬಾರದು. ಎಚ್ಚರಿಕೆ ನೀಡುತ್ತಿದ್ದೇನೆಂದರು.

ನಾಳೆ ದೊಡ್ಡ ಹೋರಾಟ : ಫೀ ಒಂದು ದಂಧೆಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ದಂಧೆ ಕೋರರಾಗಿವೆ. ಮಕ್ಕಳು ಪೋಷಕರು ಕಣ್ಣೀರು ಇಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಾಡಿದ್ದು ದಿನಾಂಕ 20ರಂದು ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ರಾಜ್ಯದ ಉದ್ದಗಲಕ್ಕೂ ಸರ್ಕಾರದ ನೀತಿಯ ವಿರುದ್ಧ ಚಳವಳಿ ಹಮ್ಮಿಕೊಂಡಿದ್ದೇನೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

error: Content is protected !!