ಖಾಸಗಿ ಫೈನಾನ್ಸ್ ಕಂಪನಿ ಸೋಗಿನಲ್ಲಿ ವಂಚನೆ

ಲೋನ್ ಆಸೆ ತೋರಿ ಲಕ್ಷಕ್ಕೂ ಅಧಿಕ ಹಣ ಗುಳುಂ

ದಾವಣಗೆರೆ, ಜೂ.17- ಖಾಸಗಿ ಫೈನಾನ್ಸ್ ಕಂಪನಿಯೊಂದರ ಹೆಸರು ಹೇಳಿಕೊಂಡು ವೈಯಕ್ತಿಕ ಲೋನ್ ಕೊಡುವುದಾಗಿ ನಂಬಿಸಿ ಬೇರೆ ಫೈನಾನ್ಸ್ ಕಂಪನಿಯ ನೌಕರನೋರ್ವನಿಗೆ 1 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ 6 ತಿಂಗಳ ನಂತರ ದೂರು ದಾಖಲಾಗಿದೆ.

ಚನ್ನಗಿರಿ ತಾಲ್ಲೂಕಿನ ಗೊಲ್ಲರಹಳ್ಳಿಯ ಜಿ.ಹೆಚ್. ಪ್ರವೀಣ್ ಮೋಸ ಹೋದವರಾಗಿದ್ದು, ಈತ ಸಹ ಬೇರೊಂದು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದೇ ದಿನಾಂಕ 17ರಂದು ದೂರವಾಣಿ ಮುಖಾಂತರ ಸಂಪರ್ಕಿಸಿದ ವ್ಯಕ್ತಿಯೋರ್ವ ತಾನು ಸೋನಾಟೆಲ್ ಫೈನಾನ್ಸ್ ಕಂಪನಿಯವನೆಂದು ಪರಿಚಿತನಾಗಿ ಲೋನ್ ನೀಡುವುದಾಗಿ ನಂಬಿಸಿ ಮೊಬೈಲ್ ಮುಖೇನ ಕೆಲ ದಾಖಲಾತಿಗಳನ್ನು ಪಡೆದು, ವಿಮೆ ದಾಖಲೆಗಳ ಖರ್ಚು ಎಂದು 13 ಸಾವಿರ ಹಣವನ್ನು ಆನ್ ಲೈನ್ ಮುಖೇನ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಖಾತೆಗೆ ವರ್ಗಾಯಿಸಲಾಯಿತು. 

4 ಲಕ್ಷ ಲೋನ್ ಮಂಜೂರಾಗಿರುವುದಾಗಿ ಹೇಳಿ ಲೋನ್ ಭದ್ರತೆಗಾಗಿ ಎಂದು ಹೇಳಿದ್ದಕ್ಕೆ 53,400 ಹಣವನ್ನು ಪುನಃ ಖಾತೆಗೆ ವರ್ಗಾಯಿಸಲಾಯಿತು. ನಂತರ ನಿಮ್ಮ ಬ್ಯಾಂಕ್ ಖಾತೆಗೆ ಲೋನ್ ಹಣ ಹಾಕಿರುವುದಾಗಿ ಅಪರಿಚಿತ ಹೇಳಿದ್ದಕ್ಕೆ ಪರಿಶೀಲಿಸಿದಾಗ ಖಾತೆಗೆ ಹಣ ಬಂದಿರಲಿಲ್ಲ. ನಂತರ ಆತ ದೂರವಾಣಿ ಮುಖೇನ ಸಂಪರ್ಕಿಸಿ ಜಿಎಸ್ ಟಿ ಹಣ ಕಟ್ಟದ ಕಾರಣ ನಿಮ್ಮ ಖಾತೆಗೆ ಹಣ ಬಂದಿಲ್ಲ. ಹಾಗಾಗಿ 44,700 ರೂ. ಜಿಎಸ್ ಟಿ ಕಟ್ಟುವಂತೆ ತಿಳಿಸಿದಂತೆ ಆ ಹಣವನ್ನು ವರ್ಗಾಯಿಸಲಾ ಯಿತು. ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಅಪರಿಚಿತನು ಇಂದು-ನಾಳೆ ಎಂದು ನೆಪ ಹೇಳಿದಾಗ ಲೋನ್ ಕ್ಯಾನ್ಸಲ್ ಮಾಡಿ ಕಟ್ಟಿರುವ ಹಣ ವಾಪಸ್ ಮಾಡುವಂತೆ ಕೇಳಿದಾಗ, ಕ್ಯಾನ್ಸಲ್ ಚಾರ್ಚ್ 5 ಸಾವಿರ ಕಟ್ಟಲು ತಿಳಿಸಿದಂತೆ ಹಣ ವರ್ಗಾಯಿಸಲಾಯಿತು. ತದನಂತರ ಅಪರಿಚಿತನು ಸಂಪರ್ಕಕ್ಕೆ ಸಿಗದೇ ಕಟ್ಟಿದ ಹಣ ಒಟ್ಟು 1 ಲಕ್ಷದ 16 ಸಾವಿರ ರೂ. ವಾಪಸ್ ಮಾಡದೇ ವಂಚಿಸಿರುವುದಾಗಿ ಪ್ರವೀಣ್ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

error: Content is protected !!