ಕೊರೊನಾ: ವೈದ್ಯ ದಂಪತಿ ಗುಣ

ದಾವಣಗೆರೆ, ಜೂ. 12 – ನಗರದ ಪಿ.ಜೆ. ಬಡಾವಣೆಯಲ್ಲಿ ಕೊರೊನಾ ಸೋಂಕಿಗೆ ಗುರಿಯಾಗಿದ್ದ ಇಬ್ಬರು ನೇತ್ರ ವೈದ್ಯರು ಸಂಪೂರ್ಣ ಗುಣಮುಖರಾಗಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯ ವೈದ್ಯ ದಂಪತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಅಸಿಂಪ್ಟಮೆಟಿಕ್ (ಸೋಂಕು ಲಕ್ಷಣ ರಹಿತ) ಆಗಿದ್ದ ಇವರು, ನಿನ್ನೆ ಗುರುವಾರ ಪರೀಕ್ಷೆಗೆ ಒಳಗಾದಾಗ ಗುಣಮುಖರಾಗಿರುವುದಾಗಿ ವರದಿ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಕೆಲ ವೈದ್ಯರು, ನರ್ಸ್ ಸೇರಿದಂತೆ ಕೊರೊನಾ ವಾರಿಯರ್‌ಗಳಲ್ಲಿ ಸೋಂಕು ಕಂಡು ಬಂದಿದ್ದು ಕಳವಳಕ್ಕೆ ಕಾರಣವಾಗಿತ್ತು. ಈಗ ವೈದ್ಯರು ಗುಣಮುಖರಾಗಿ ರುವುದು ಸಮಾಧಾನ ತರುವ ವಿಷಯವಾಗಿದೆ.

error: Content is protected !!