ಕೊರೊನಾ ವೈರಸ್ : ನಗರದಲ್ಲಿ 9 ಪಾಸಿಟಿವ್, 3 ಬಿಡುಗಡೆ

ದಾವಣಗೆರೆ, ಜೂ. 11- ಜಿಲ್ಲೆಯಲ್ಲಿ ಇಂದು 9 ಕೊರೊನಾ  ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 3 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ರೋಗಿ ಸಂಖ್ಯೆ- 6151, 27 ವರ್ಷದ ಮಹಿಳೆ, 6152, 38 ವರ್ಷದ ಪುರುಷ, 6153, 38 ವರ್ಷದ ಮಹಿಳೆ, 6154, 42 ವರ್ಷದ ಪುರುಷ, 6158, 4 ವರ್ಷದ ಗಂಡು ಮಗು ಎಲ್ಲರೂ ರೋಗಿ ಸಂಖ್ಯೆ- 4837 ಸಂಪರ್ಕಿತರಾಗಿದ್ದಾರೆ. 

ರೋಗಿ ಸಂಖ್ಯೆ- 6155, 18 ವರ್ಷದ ಯುವತಿ, 6156, 62 ವರ್ಷದ ಮಹಿಳೆ, 6157  66 ವರ್ಷದ ಪುರುಷ ಈ ಮೂವರು ರಾಜಸ್ಥಾನದಿಂದ ಹಿಂದಿರುಗಿದವರು. ರೋಗಿ ಸಂಖ್ಯೆ- 6159, 64 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ದಾಖಲಾ ಗಿದ್ದಾರೆ. ರೋಗಿ ಸಂಖ್ಯೆ- 4094, 4095, ಮತ್ತು 2417 ಇವರು  ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇದುವರೆಗೆ ಒಟ್ಟು 223 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 168 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 49 ಸಕ್ರಿಯ ಪ್ರಕರಣಗಳಿವೆ.

error: Content is protected !!